ಭಾರತ, ಫೆಬ್ರವರಿ 25 -- ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಹಾಗೂ ರುಕ್ಕು ಇಬ್ಬರೂ ಒಟ್ಟಾಗಿ ಸೇರಿಕೊಂಡು ಸಾಕಷ್ಟು ಅವಾಂತರ ಸೃಷ್ಟಿ ಮಾಡುತ್ತಿದ್ದಾರೆ. ಚಾರು ಮತ್ತು ರಾಮಾಚಾರಿ ಇಬ್ಬರು ಒಂದಾಗುವ ಸಮಯ ಬಂದಿದೆ. ಆದರೆ, ವೈಶಾಖಾ ಮತ್ತು ರುಕ್ಕು ಇಬ್ಬರಿಗೂ ಅವರು ಒಂದಾಗುವುದು ಇಷ್ಟವಿಲ್ಲ. ಆ ಕಾರಣಕ್ಕಾಗಿ ವೈಶಾಖಾ ರಾಮಾಚಾರಿ ತಿನ್ನುವ ಆಹಾರದಲ್ಲಿ ವಿಷ ಹಾಕಿದ್ದಾಳೆ. ಆದರೆ, ಆ ವಿಷ ರಾಮಾಚಾರಿ ದೇಹ ಸೇರಿದೆಯೇ? ಇಲ್ಲವೇ? ಎಂದು ಅವಳಿಗೆ ಅನುಮಾನ ಆಗುತ್ತಿದೆ.

ಇನ್ನು ರಾತ್ರಿ ಚಾರು ಹೋಗಿ ಮಲಗಿಕೊಳ್ಳುವ ಸಮಯದಲ್ಲಿ ರಾಮಾಚಾರಿ ಹತ್ತಿರ ಒಂದಿಷ್ಟು ವಿಚಾರ ಮಾತಾಡುತ್ತಾಳೆ. ಅತ್ತೆ ಮೊಮ್ಮಗು ಬೇಕು ಎಂದ ವಿಚಾರವಾಗಿ ಮಾತಾಡುವ ಯತ್ನ ಮಾಡುತ್ತಾಳೆ. ಸೂಚ್ಯವಾಗಿ ಆ ವಿಚಾರವನ್ನೇ ತೆಗೆಯುತ್ತಾಳೆ. ನಮಗಿದ್ದ ಎಲ್ಲ ಜವಾಬ್ಧಾರಿ ಕೂಡ ಕಡಿಮೆ ಆಗಿದೆ. ಈಗ ಹೊಸ ಜವಾಬ್ದಾರಿಯನ್ನು ನಾವಿಬ್ಬರೂ ತೆಗೆದುಕೊಳ್ಳಬೇಕು ಎಂದು ಹೇಳುತ್ತಾಳೆ. ಆಗಲೇ ರಾಮಾಚಾರಿಗೆ ಚಾರು ಏನು ಹೇಳುತ್ತಿದ್ದಾಳೆ ಎನ್ನುವುದು ಅರ್ಥವಾಗಿರುತ್ತದೆ. ಆದರೂ, ಅವನು ನಾಟಕ ಮಾಡು...