Bangalore, ಮಾರ್ಚ್ 27 -- Puc Results 2025: ಕರ್ನಾಟಕದಲ್ಲಿ 2024-25 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ಣಗೊಂಡಿದ್ದು, ಮೌಲ್ಯಮಾಪನ ಕಾರ್ಯ ಆರಂಭಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿಯು ಪಿಯುಸಿ ಪರೀಕ್ಷೆಯನ್ನು ಮಾರ್ಚ್ 1 ರಿಂದ ಮಾರ್ಚ್ 20ರವೆರೆಗೆ ನಡೆದಿತ್ತು. ಮಾರ್ಚ್ 21 ರಿಂದ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ 76 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಈಗಾಗಲೇ ಬಹುತೇಕ ವಿಷಯಗಳ ಮೌಲ್ಯಮಾಪನ ಕೊನೆಯ ಘಟ್ಟ ತಲುಪಿದೆ. ಕೆಲವು ವಿಷಯಗಳ ಮೌಲ್ಯಮಾಪನ ಈ ಮಾಸಾಂತ್ಯಕ್ಕೆ ಮುಗಿಯಲಿದೆ. ಹೆಚ್ಚೆಂದರೆ ಏಪ್ರಿಲ್ 5ರ ವೇಳೆಗೆ ಎಲ್ಲ ವಿಷಯಗಳ ಮೌಲ್ಯಮಾಪನ ಮುಗಿಯಲಿದೆ. 31 ಸಾವಿರ ಉಪನ್ಯಾಸಕರು ಮೌಲ್ಯಮಾಪನ ಮಾಡುತ್ತಿದ್ದಾರೆ. ಏಪ್ರಿಲ್ 2 ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. 2024ರಲ್ಲಿ ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿತ್ತು.
ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶುರು ಮಾಡಲಾಗಿದೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.