ಭಾರತ, ಏಪ್ರಿಲ್ 5 -- L2 Empuraan:‌ ಇತ್ತೀಚೆಗೆ ಜಾರಿ ನಿರ್ದೇಶನಾಲಯವು ಎಲ್‌2 ಎಂಪುರಾನ್ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಇದೀಗ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. 2022ರಲ್ಲಿ ಪೃಥ್ವಿರಾಜ್‌ ನಟಿಸಿದ ಮತ್ತು ಸಹ-ನಿರ್ಮಾಣ ಮಾಡಿದ ಮೂರು ಚಲನಚಿತ್ರಗಳಿಂದ ಎಷ್ಟು ಗಳಿಕೆ ಮಾಡಲಾಗಿದೆ ಎಂದು ಸೃಷ್ಟಿಕರಣ ಕೋರಲಾಗಿದೆ ಎಂದು ವರದಿಗಳು ತಿಳಿಸಿವೆ.

ಪೃಥ್ವಿರಾಜ್ ಸುಕುಮಾರನ್‌ಗೆ ಮಾರ್ಚ್ 29 ರಂದು ಇಮೇಲ್‌ ಮೂಲಕ ಈ ನೋಟಿಸ್‌ ಕಳುಹಿಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಿತ ಆದಾಯ ತೆರಿಗೆ ಮೌಲ್ಯಮಾಪನದ ಸಮಯದಲ್ಲಿ ವ್ಯತ್ಯಾಸಗಳು ಅಥವಾ ಪ್ರಶ್ನೆಗಳನ್ನು ಗೋಚರವಾದಾಗ ಈ ನೋಟಿಸ್ ಸ್ವಯಂಚಾಲಿತವಾಗಿ ರವಾನೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 29 ರೊಳಗೆ ಈ ಕುರಿತು ವಿವರಣೆಯನ್ನು ನೀಡುವಂತೆ ಪೃಥ್ವಿರಾಜ್‌ಗೆ ತಿಳಿಸಲಾಗಿದೆ.

2022ರಲ್ಲಿ ಪೃಥ್ವಿರಾಜ್ ನಟಿಸಿದ ಮತ್ತು ಸಹ-ನಿರ್ಮಿಸಿದ ಮೂರು ಚಿತ್...