Bengaluru, ಫೆಬ್ರವರಿ 11 -- Malayalam Movie on Youtube: ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ, ಅದರ ಮುಂದಿನ ಪಯಣ ಡಿಜಿಟಲ್‌ ಪ್ರೀಮಿಯರ್‌ ಅಥವಾ ಸ್ಯಾಟಲೈಟ್‌ ಪ್ರೀಮಿಯರ್.‌ ಅತ್ಯಾಪರೂಪ ಎಂಬಂತೆ ಕೆಲವು ಸಿನಿಮಾಗಳಿಗೆ ಒಟಿಟಿ ಪ್ರಸಾರಕ್ಕೆ ಚಾನ್ಸ್‌ ಸಿಗದಿದ್ದಾಗ, ಆ ಚಿತ್ರಗಳು ಯೂಟ್ಯೂಬ್‌ ಮೊರೆ ಹೋಗುತ್ತವೆ. ಇದೀಗ ಮಲಯಾಳಂನ ಪರಾಕ್ರಮ್‌ ಶೀರ್ಷಿಕೆಯ ಸಿನಿಮಾ ಒಟಿಟಿ ಬದಲು, ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಪರಾಕ್ರಮಂ ಸಿನಿಮಾ, ಮೂರು ತಿಂಗಳಾದರೂ ಒಟಿಟಿಗೆ ಆಗಮಿಸಿರಲಿಲ್ಲ. ಐಎಂಡಿಬಿಯಲ್ಲಿ 7.5 ರೇಟಿಂಗ್‌ ಪಡೆದ ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಬರಲಿದೆ ಎಂದೇ ಒಟಿಟಿ ವೀಕ್ಷಕರು ಕಾಯುತ್ತಿದ್ದರು. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ, ಒಟಿಟಿ ಬದಲು ನೇರವಾಗಿ ಯೂಟ್ಯೂಬ್‌ ಹಾದಿ ಹಿಡಿದಿದೆ ಈ ಸಿನಿಮಾ. ಹಾಗಾದರೆ ಯಾವ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಸಿನಿಮಾದ ವೀಕ್ಷಣೆ? ಇಲ್ಲಿದೆ ಮಾಹಿತಿ.

ಮಲಯಾಳಂ ಪರಾಕ್ರಮಂ ಚಿತ್ರ ಕಳೆದ ವರ್ಷದ ನವೆಂ...