Bengaluru, ಮಾರ್ಚ್ 1 -- ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಸುದಲ್ ಸೀಸನ್ 2 ಮತ್ತು ಜಿದ್ದಿ ಗರ್ಲ್ಸ್, ಎಂಎಕ್ಸ್ ಪ್ಲೇಯರ್‌ನಲ್ಲಿ ಆಶ್ರಮ್ ಸೀಸನ್ 3 ಪಾರ್ಟ್ 2, ಜಿಯೋ ಹಾಟ್‌ಸ್ಟಾರ್‌ನಲ್ಲಿ ಲವ್ ಅಂಡರ್ ಕನ್‌ಸ್ಟ್ರಕ್ಟನ್‌, ನೆಟ್‌ಫ್ಲಿಕ್ಸ್‌ನಲ್ಲಿ ಡಬ್ಬಾ ಕಾರ್ಟೆಲ್ ಸಿರೀಸ್‌ಗಳನ್ನು ವೀಕ್ಷಿಸಬಹುದು.

ಸುಡಾಲ್ ಸೀಸನ್ 2: ತಮಿಳಿನಲ್ಲಿ ಸಿದ್ಧವಾಗಿರುವ ಸುಡಾಲ್ ದಿ ವೊರ್ಟೆಕ್ಸ್ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯ ಮುಂದುವರಿದ ಭಾಗವಾಗಿ ಸೀಸನ್‌ 2 ಪ್ರಸಾರ ಆರಂಭಿಸಿದೆ. ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿರುವ ಈ ಕ್ರೈಂ ಥ್ರಿಲ್ಲರ್‌ ಶೈಲಿಯ ಸಿರೀಸ್‌ನಲ್ಲಿ ಕಾಥೀರ್‌, ಐಶ್ವರ್ಯಾ ರಾಜೇಶ್, ಗೋಪಿಕಾ ರಮೇಶ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

ಆಶ್ರಮ್ ಸೀಸನ್ 3 ಭಾಗ 2: ಎಂಎಕ್ಸ್‌ ಪ್ಲೇಯರ್‌ ಒಟಿಟಿಯಲ್ಲಿ ಆಶ್ರಮ್ ಸೀಸನ್ 3 ಭಾಗ 2 ಸ್ಟ್ರೀಮಿಂಗ್‌ ಆರಂಭಿಸಿದೆ. ಸೀಸನ್‌ 3 ಭಾಗ 2ರ ಮೂಲಕ ಪ್ರೇಕ್ಷಕರಿಗೆ ಹೆಚ್ಚುವರಿ ಐದು ಕಂತುಗಳನ್ನು ನೀಡಿದೆ. ಬಾಲಿವುಡ್‌ ನಟ ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಜಿದ್...