ಭಾರತ, ಫೆಬ್ರವರಿ 21 -- ಒಟಿಟಿಯಲ್ಲಿ ವೆಬ್‌ ಸಿರೀಸ್‌ ವೀಕ್ಷಿಸುವವರಿಗೆ ಈ ವಾರ ಹಬ್ಬ ಎಂದೇ ಹೇಳಬಹುದು. 3 ವಿಭಿನ್ನ ಕಥಾಹಂದರ ಹೊಂದಿರುವ ವೆಬ್‌ಸರಣಿಗಳು ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಒಂದು ಕ್ರೈಮ್ ಥಿಲ್ಲರ್ ಸರಣಿಯಾಗಿದೆ. ಅನಿರೀಕ್ಷಿತ ತಿರುವು ಪಡೆದು ಗರ್ಭಿಣಿಯಾಗುವ ಹುಡುಗಿಯ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಸರ್ಕಾರಿ ಕಚೇರಿಯಲ್ಲಿ ನಡೆಯುವ ಕಥೆಯನ್ನು ಇನ್ನೊಂದು ವೆಬ್‌ಸರಣಿ ಹೊಂದಿದೆ. ಈ ಮೂರು ಈ ವಾರದ ಟಾಪ್ ವೆಬ್‌ಸರಣಿಗಳಾಗಿವೆ. ಈ ಕುರಿತ ಇನ್ನಷ್ಟು ವಿವರಗಳು ಇಲ್ಲಿದೆ.

ಊಪ್ಸ್ ಅಬ್‌ ಕ್ಯಾ ಈ ವೆಬ್ ಸರಣಿಯು ಈ ಗುರುವಾರ (ಫೆಬ್ರವರಿ 20) ಜಿಯೋಹಾಟ್‌ಸ್ಟಾರ್ (ಡಿಸ್ನಿಪ್ಲಸ್ ಹಾಟ್‌ಸ್ಟಾರ್) ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರಲ್ಲಿ ಶ್ವೇತಾ ಬಸು ಪ್ರಸಾದ್ ಮತ್ತು ಆಶಿಮ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯನ್ನು ಪ್ರೇಮ್ ಮಿಸ್ತ್ರಿ ಮತ್ತು ದೇವಾತ್ಮ ಮಂಡಲ್ ನಿರ್ದೇಶಿಸಿದ್ದಾರೆ.

ಊಪ್ಸ್ ಅಪ್ ಕ್ಯಾ ಸರಣಿಯು ಆಕಸ್ಮಿಕವಾಗಿ ತನ್ನ ಬಾಸ್‌ನ ವೀರ್ಯವನ್ನು ಹುಡುಗಿಗೆ ಇಂಜೆಕ್ಟ್ ಮಾಡ...