Bangalore, ಏಪ್ರಿಲ್ 1 -- OTT Crime Thriller: ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿಗೆ ಓಟಿಟಿಯಲ್ಲಿ, ಅದರಲ್ಲೂ ನೆಟ್‌ಫ್ಲಿಕ್ಸ್‌ನಲ್ಲಿ ಎಷ್ಟು ಕ್ರೇಜ್ ಇದೆ ಎಂಬುದನ್ನು ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂ ಸಿನಿಮಾ 'ಆಫೀಸರ್ ಆನ್ ಡ್ಯೂಟಿ' ಮತ್ತೊಮ್ಮೆ ಸಾಬೀತುಪಡಿಸಿದೆ. ಫೆಬ್ರವರಿಯಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಈ ಸಿನಿಮಾ, ಈಗ ನೆಟ್‌ಫ್ಲಿಕ್ಸ್‌ನಲ್ಲೂ ಟಾಪ್ 1ರಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ 'ಆಫೀಸರ್ ಆನ್ ಡ್ಯೂಟಿ' ಈಗ ನೆಟ್‌ಫ್ಲಿಕ್ಸ್ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಾರ್ಚ್ 20ರಿಂದ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫೆಬ್ರವರಿಯಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ 27 ಸಿನಿಮಾಗಳಲ್ಲಿ ಏಕೈಕ ಹಿಟ್ ಚಿತ್ರ 'ಆಫೀಸರ್ ಆನ್ ಡ್ಯೂಟಿ'. ಇದೀಗ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲೂ ಮುನ್ನುಗ್ಗುತ್ತಿದೆ.

ಒಂದು ಸಣ್ಣ ನಕಲಿ ಚೈನ್ ಪ್ರಕರಣ ಹೇಗೆ ಹ...