Bengaluru, ಮಾರ್ಚ್ 3 -- Oscars 2025: 97ನೇ ಅಕಾಡೆಮಿ ಅವಾರ್ಡ್ಸ್‌ ಪ್ರದಾನ ಸಮಾರಂಭ ಅಮೆರಿಕಾದ ಲಾಸ್‌ ಏಂಜಲಸ್‌ನಲ್ಲಿ ಗ್ರ್ಯಾಂಡ್‌ ಆಗಿ ನಡೆದಿದೆ. ವಿಪರ್ಯಾಸ ಏನೆಂದರೆ ಈ ಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಭಾರತದಿಂದ ಒಂದೇ ಒಂದು ಚಿತ್ರವೂ ಅಂತಿಮ ನಾಮನಿರ್ದೇಶನಗಳಲ್ಲಿ ಸ್ಥಾನ ಪಡೆದಿರಲಿಲ್ಲ. ಈ ನಡುವೆ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಿಯಾಂಕಾ ಚೋಪ್ರಾ ನಿರ್ಮಿಸಿರುವ ಅನುಜಾ ಕಿರುಚಿತ್ರ, ಆಸ್ಕರ್ ಪ್ರಶಸ್ತಿ ಗೆಲ್ಲುವ ಭರವಸೆ ಹೆಚ್ಚಿಸಿತ್ತು. ಆ ಕಿರುಚಿತ್ರವೂ ಕೊನೇ ಕ್ಷಣದಲ್ಲಿ ನಿರಾಸೆ ಮೂಡಿಸಿತು. ಇಂತಿಪ್ಪ ಕಿರುಚಿತ್ರ ಈಗಾಗಲೇ ಒಟಿಟಿಯಲ್ಲಿ ವೀಕ್ಷಿಸಬಹುದು.

ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಐ ಆಮ್ ನಾಟ್ ಎ ರೋಬೋಟ್, ಎ ಲಿಯನ್, ಅನುಜಾ, ದಿ ಲಾಸ್ಟ್ ರೇಂಜರ್, ಎ ಮ್ಯಾನ್ ಹೂ ಕುಡ್ ನಾಟ್ ರಿಮೇನ್ ಸೈಲೆಂಟ್ ಈ ಐದು ಕಿರುಚಿತ್ರಗಳು ನಾಮಿನೇಟ್‌ ಆಗಿದ್ದವು. ಈ ಐದರ ಪೈಕಿ ಡಚ್ ಭಾಷೆಯ ಐ ಆಮ್ ನಾಟ್ ಎ ರೋಬೋಟ್ ಕಿರುಚಿತ್ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಅನುಜಾ ಕಿರುಚಿತ್ರವ...