ಭಾರತ, ಮಾರ್ಚ್ 8 -- ಡಾ ರೂಪಾ ರಾವ್‌ ಬರಹ: ಇತ್ತೀಚೆಗೆ ತಮಿಳಿನಲ್ಲಿ ಕಾದಲಿಕ್ಕ ನೆರಮಿಲ್ಲೈ (Kadhalikka Neramillai) ಎಂಬ ಸಿನಿಮಾ ಬಿಡುಗಡೆಯಾಗಿದೆ. ಇದೀಗ ಈ ಸಿನಿಮಾ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 16.50 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಜಯಂ ರವಿ , ನಿತ್ಯಾ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಡಿಗೆ ತಾಯ್ತನ ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಿನಿಮಾ ಮಾತನಾಡುತ್ತಿದೆ. ಕಾದಲಿಕ್ಕಾ ನೇರಮಿಲ್ಲೆ ಸಿನಿಮಾದ ಕುರಿತು ಮನಶಾಸ್ತ್ರಜ್ಞೆ ಮತ್ತು ಬರಹಗಾರ್ತಿ ರೂಪಾ ರಾವ್‌ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಮಗು ಮಾಡಿಕೊಳ್ಳಲು ಗಂಡಸೇಕೆ ಬೇಕು "

"ನಾವು ಮದುವೆಯಾಗಬೇಕಾ?"

"ಬೇಡ‌, ಜೊತೆಯಾಗಿಯೇರೋಣ ಹೀಗೇ"

"ನಾನಿನ್ನೂ ವರ್ಜಿನ್ ಅಂತ ಅಂದುಕೊಂಡಿದ್ಯಾ ಅಮ್ಮ?"

"ಮದುವೆ ಮಕ್ಕಳು ಇವೆಲ್ಲಾ ಪರಿಸರ ಸಂರಕ್ಷಣೆಗೆ ಮಾರಕ"

ಇವತ್ತು ಕಾದಲಿಕ್ಕ ನೆರಮಿಲ್ಲೈ ಸಿನಿಮಾ ನೋಡಿದೆ. ಆ ಸಿನಿಮಾದ ಡೈಲಾಗುಗಳು ಇವು.

ಇದೊಂದು ಅತ್ಯುತ್ತಮ ಮನರಂ...