ಭಾರತ, ಫೆಬ್ರವರಿ 27 -- ನೆಟ್‌ಫ್ಲಿಕ್ಸ್‌ ತನ್ನ ಮುಂದಿನ ವೆಬ್‌ ಸರಣಿ "ಓ ಸಾಥಿ ರೇ"ಯ ಫಸ್ಟ್‌ ಲುಕ್‌ ವಿಡಿಯೋ ಬಿಡುಗಡೆ ಮಾಡಿದೆ. ಇದು ಆರಿಫ್ ಅಲಿ ನಿರ್ದೇಶನದ ಸರಣಿಯಾಗಿದೆ. ಈ ವೆಬ್‌ ಸೀರಿಸ್‌ನಲ್ಲಿ ಅವಿನಾಶ್ ತಿವಾರಿ, ಅದಿತಿ ರಾವ್ ಹೈದರಿ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

"ಇಮ್ತಿಯಾಜ್ ಅಲಿ ಅವರ 'ಓ ಸಾಥಿ ರೇ' ವೆಬ್‌ಸರಣಿ ಇದಾಗಿದೆ. ಈ ಕಾಳದ ಪ್ರೀತಿಗೆ ಹಳೆಯ ಭಾವನೆಯ ಗೀತಾರೂಪಕ ಇದಾಗಿದೆ. ಅದಿತಿ ರಾವ್ ಹೈದರಿ, ಅವಿನಾಶ್ ತಿವಾರಿ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ" ಎಂದು ನೆಟ್‌ಫ್ಲಿಕ್ಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಈ ವೆಬ್‌ಸರಣಿ ಕುರಿತು ನೆಟ್‌ಫ್ಲಿಕ್ಸ್‌ ಸದ್ಯ ಇಷ್ಟೇ ವಿವರ ನೀಡಿದೆ. ನಿರ್ದೇಶಕ ಇಮ್ತಿಯಾಜ್ ಅಲಿ ಜೊತೆಗೆ ಪ್ರಮುಖ ನಟರು ತಮ್ಮ ಸ್ಕ್ರಿಪ್ಟ್‌ಗಳನ್ನು ಒಟ್ಟಿಗೆ ಓದುತ್ತಿರುವುದನ್ನು ಫಸ್ಟ್‌ಲುಕ್‌ನಲ್ಲಿ ನೋಡಬಹುದಾಗಿದೆ. ಆದರೆ, ಈ ವೆಬ್‌ಸರಣಿ ಯಾವಾಗ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿಲ್ಲ.

ಈ ವೆಬ್‌ಸರಣಿಯ ಕಥೆಯೇನು? ಯಾವ ದಿನಾಂಕದಂ...