ಭಾರತ, ಮಾರ್ಚ್ 22 -- Narayana Narayana Review: ಹಳ್ಳಿ ಜೀವನ, ಊರ ಗೌಡನ ಆಳ್ವಿಕೆ, ಅದೇ ಊರಲ್ಲೊಬ್ಬ ನಾಟಕದ ಮೇಷ್ಟ್ರು, ಚೆಂದದ ಹುಡುಗಿ, ಆಕೆ ಮೇಲೆ ಕಣ್ಣಿಟ್ಟ ಒಂದಷ್ಟು ಹುಡುಗರು, ನವಿರು ಕಾಮಿಡಿ ಜತೆಗೆ ಹಳ್ಳಿ ಹುಡುಗರ ನಿಧಿ ಹುಡುಕಾಟದ ಹಾಡು ಪಾಡು... ಇದು ಈ ವಾರ ತೆರೆಗೆ ಬಂದಿರುವ ನಾರಾಯಣ ನಾರಾಯಣ ಸಿನಿಮಾದ ಒಂದೆಳೆ. ಕಾಮಿಡಿ ಸಿನಿಮಾ ಅಂತ ಹೇಳಿಕೊಂಡ ನಾರಾಯಣ ನಾರಾಯಣ ಮೊದಲಾರ್ಧದಲ್ಲಿ ಕಾಮಿಡಿ ಸಿಹಿಯುಣಿಸಿ, ದ್ವಿತೀಯಾರ್ಧಕ್ಕೆ ಒಂದಷ್ಟು ಸಸ್ಪೆನ್ಸ್ ಜತೆಗೆ ಥ್ರಿಲ್ಲರ್ ಅಂಶಗಳನ್ನೂ ಮಿಶ್ರಣ ಮಾಡಿ ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ನಿರ್ದೇಶಕ ಶ್ರೀಕಾಂತ್ ಕೆಂಚಪ್ಪ.
ನಾರಾಯಣ ನಾರಾಯಣ ಚಿತ್ರ ನಿಧಿ ಹುಡುಕಾಟದ ಸುತ್ತ ಗಿರಕಿ ಹೊಡೆಯುವ ಕಥೆ. ಪ್ರೀತಿ ಗೀತಿ ಇತ್ಯಾದಿ ಜತೆಗೆ ಸ್ನೇಹಕ್ಕೂ ಇಲ್ಲಿ ಜಾಗ ಕಲ್ಪಿಸಿದ್ದಾರೆ ನಿರ್ದೇಶಕರು. ಹಳ್ಳಿ ಅಂದ ಮೇಲೆ ಅಲ್ಲಿ ಹಗೆತನ, ದ್ವೇಷ, ದಳ್ಳುರಿ, ಮೌಢ್ಯಗಳು ಸಹಜ. ಇವುಗಳನ್ನು ನಾರಾಯಣ ನಾರಾಯಣ ಚಿತ್ರದಲ್ಲಿ ಮುಂದುವರಿಸಿಕೊಂಡು, ಹಾಸ್ಯದ ಜತೆಗೆ ಸಂದೇಶವೊಂದನ್ನು ಪ್ರೇಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.