Mysuru, ಮಾರ್ಚ್ 29 -- ಮೈಸೂರು: ಮೈಸೂರು ಜಿಲ್ಲೆಯ ಯುಗಾದಿ ಹಬ್ಬದ ಸಂಭ್ರಮದಲಿದ್ದ ಈ ಮೂರು ಮನೆಗಳಲ್ಲಿ ಹಬ್ಬದ ಮುನ್ನಾ ದಿನ ಸೂತಕದ ಛಾಯೆ ಆವರಿಸಿದೆ. ಭಾನುವಾರ ನಡೆಯಲಿರುವ ಈ ಸಾಲಿನ ಯುಗಾದಿ ಹಬ್ಬಕ್ಕೆ ಹಸುಗಳನ್ನು ತೊಳೆಯಲು ಹೋದ ಮೂವರು ಕೆರೆ ಪಾಲಾಗಿ ಜೀವ ಕಳೆದುಕೊಂಡಿರುವ ದುರಂತ ಘಟನೆ ನಡೆದಿದೆ. ಒಂದೇ ಗ್ರಾಮದ ಮೂವರು ಯುಗಾದಿ ಹಬ್ಬಕ್ಕೆ ರಾಸುಗಳನ್ನು ತಯಾರು ಮಾಡಲೆಂದು ಹೋಗಿದ್ದು ಕೆರೆಗೆ ಹೋಗಿದ್ದರು. ಈ ವೇಳೆ ಒಬ್ಬಾತ ಕೆರೆಯೊಳಗೆ ಹಸು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಹೋದ ಇನ್ನೂ ಇಬ್ಬರೂ ಕೂಡ ಕೆರೆ ಪಾಲಾಗಿದ್ದಾರೆ. ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾಮಳ್ಳಿ ಗ್ರಾಮದಲ್ಲಿ. ಕಾಮಳ್ಳಿಯ ನಿವಾಸಿಗಳಾದ ಮುದ್ದೇಗೌಡ (48), ಬಸವೇಗೌಡ (45), ವಿನೋದ್ (17) ಮೃತ ದುರ್ದೈವಿಗಳು.

Published by HT Digital Content Services with permission from HT Kannada....