ಭಾರತ, ಮಾರ್ಚ್ 10 -- Moana 2 OTT: ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಮೋನಾ ಎಂಬ ಸಿನಿಮಾ ನಿಮಗೆ ನೆನಪಿರಬಹುದು. ಮಕ್ಕಳು ಮಾತ್ರವಲ್ಲದೆ, ಮಕ್ಕಳ ಜತೆ ದೊಡ್ಡವರೂ ಕೂಡ ಖುಷಿಯಿಂದ ನೋಡಬಹುದಾದ ಸಿನಿಮಾವಿದು. ಈ ಸಿನಿಮಾದ ಯಶಸ್ಸಿನ ಬಳಿಕ ಮೋನಾ ಫ್ರಾಂಚೈಸಿಯಡಿ ಮೋನಾ 2 ಕಳೆದ ವರ್ಷ ಬಿಡುಗಡೆಯಾಗಿತ್ತು. ಇದೀಗ ಮೋನಾ 2 ಒಟಿಟಿಯತ್ತ ಮುಖ ಮಾಡಿದೆ.

ಈ ವಾರ ಅಂದರೆ ಮಾರ್ಚ್‌ 14ರಂದು ಮೋನಾ 2 ಸಿನಿಮಾವು ಜಿಯೋಹಾಟ್‌ಸ್ಟಾರ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮೋನಾ 2 ಅಮೆರಿಕದ ಅನಿಮೇಷನ್‌ ಸಂಗೀತ ಸಾಹಸ ಸಿನಿಮಾ. ವಾಲ್ಟ್ ಡಿಸ್ನಿ ಅನಿಮೇಷನ್ ಸ್ಟುಡಿಯೋಸ್ ನಿರ್ಮಿಸಿದ ಈ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. 2016ರಲ್ಲಿ ಬಿಡುಗಡೆಯಾದ ಮೋನಾದ ಉತ್ತರ ಭಾಗದ ಕಥೆಯನ್ನು ಇದು ಹೊಂದಿದೆ. ಡೇವಿಡ್ ಡೆರಿಕ್ ಜೂನಿಯರ್, ಜೇಸನ್ ಹ್ಯಾಂಡ್ ಮತ್ತು ಡಾನಾ ಲೆಡೌಕ್ಸ್ ಮಿಲ್ಲರ್ ನಿರ್ದೇಶನದ ಮೋನಾ 2 ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು. ಆಲಿ ಕ್ರಾವಾಲ್ಹೋ ಮತ್ತು ಡ್ವೇನ್ ಜಾನ್ಸನ್ ಪ್ರಮುಖ ಪ...