ಭಾರತ, ಮಾರ್ಚ್ 9 -- ಮಂಗಳೂರು: ಸಾಕಷ್ಟು ಆತಂಕ, ಗೊಂದಲ, ಊಹಾಪೋಹ ಹಾಗೂ ತಲ್ಲಣಗಳಿಗೆ ಕಾರಣವಾದ ಫರಂಗಿಪೇಟೆಯ ಹದಿನೇಳು ವರ್ಷದ ಬಾಲಕ ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ. ಉಡುಪಿಯ ಮಳಿಗೆಯೊಂದರಲ್ಲಿ ಆತ ಕಂಡುಬಂದಿದ್ದಾನೆ ಎಂಬ ವಿಚಾರ ಶನಿವಾರ ಮಧ್ಯಾಹ್ನ ಮನೆಯವರಿಗೆ ಲಭ್ಯವಾದ ಬಳಿಕ ಕಿದೆಬೆಟ್ಟು ಪದ್ಮನಾಭ ಅವರ ಕುಟುಂಬದಲ್ಲಿ ಸಂತಸ ಮೂಡಿತು. ಪ್ರಕರಣದ ಸಂಬಂಧ ಭಾರೀ ಒತ್ತಡದೊಂದಿಗೆ ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ನಿಟ್ಟುಸಿರುಬಿಡುವಂತಾಗಿದೆ. ಬಾಲಕ ಹೋದದ್ದಾದರೂ ಎಲ್ಲಿಗೆ, ಆತನನ್ನು ಅಪಹರಿಸಿದರೇ ಅಥವಾ ತಾನಾಗಿಯೇ ಹೋದನೇ? ಇಷ್ಟು ದಿನ ಆತನಿಗೆ ಆಶ್ರಯ ನೀಡಿದವರಾರು ಎಂಬುದು ಕುತೂಹಲಕಾರಿಯಾಗಿದೆ. ಮನೆಯಿಂದ ಹೊರಟು ಮೈಸೂರು, ಬೆಂಗಳೂರು, ಶಿವಮೊಗ್ಗ ಸಹಿತ ಹಲವು ಊರುಗಳನ್ನು ನೋಡಿ, ಬಳಿಕ ಉಡುಪಿಗೆ ಬಂದಿಳಿದಿದ್ದು, ಇದಕ್ಕೆಲ್ಲಾ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಭಯವೇ (SSLC Exam Fear) ಕಾರಣ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಸದ್...