Bengaluru, ಮಾರ್ಚ್ 21 -- ಮಲಯಾಳಂನಲ್ಲಿನ ಟಾಪ್‌ 5 ನಾಯಕಿ ಪ್ರಧಾನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ಮನಮುಟ್ಟುವ ಕಥೆ, ಅಚ್ಚುಕಟ್ಟು ನಿರೂಪಣೆ ಮೂಲಕ ಹಿಟ್‌ ಪಟ್ಟಿಗೆ ಸೇರಿವೆ ಈ ಸಿನಿಮಾಗಳು.

ಹೌ ಓಲ್ಡ್ ಆರ್ ಯು: ಮಹಿಳೆ ಮತ್ತು ಸಮಾಜದ ನಡುವಿನ ಬಂಧದ ಕಥೆಯೇ ಹೌ ಓಲ್ಡ್‌ ಆರ್‌ ಯೂ. ನಟಿ ಮಂಜು ವಾರಿಯರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, sun nxt ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.

ಸೂಪರ್ ಶರಣ್ಯ: ರೇಖಾಚಿತ್ರಂ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಅನಸ್ವರ ರಾಜನ್, ನಟಿಸಿದ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಶರಣ್ಯ. ಸಣ್ಣ ಪಟ್ಟಣದ ಹುಡುಗಿಯ ಜೀವನ ಕಥೆಯಿರುವ ಈ ಸಿನಿಮಾ Zee5 ಒಟಿಟಿಯಲ್ಲಿದೆ.

ಓಂ ಶಾಂತಿ ಓಶಾನ: ನಜ್ರಿಯಾ ನಜೀಮ್ ನಾಯಕಿಯಾಗಿ ನಟಿಸಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಹೊಸ ನಿರೂಪಣೆಯ ಮೂಲಕವೇ ಸದ್ದು ಜತೆಗೆ ಯಶಸ್ಸು ಕಂಡಿತ್ತು. ಈ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಲಭ್ಯವಿದೆ.

ದಿ ಗ್ರೇಟ್ ಇಂಡಿಯನ್ ಕಿಚನ್: ಮಲಯಾಳಂ ನಟಿ‌ ನಿಮಿಷಾ ಸಜಯನ್ ನಟಿಸಿದ ಈ ಚಿತ್ರವು ಸಾಂಪ್ರದಾಯಿಕ ಮನೆಗಳಲ್ಲಿ ಮ...