ಭಾರತ, ಮಾರ್ಚ್ 12 -- Malayalam Movies: ಮೊದಲೆಲ್ಲ ಕನ್ನಡ ಸಿನಿಮಾಗಳು ಜನಪ್ರಿಯ ಕಾದಂಬರಿಗಳನ್ನು ಆಧರಿಸಿರುತ್ತಿದ್ದವು. ಆದರೆ, ಕನ್ನಡದಲ್ಲಿ ಈಗ ಕಾದಂಬರಿ ಆಧರಿತ ಸಿನಿಮಾಗಳು ಬರುವುದು ಕಡಿಮೆಯಾಗಿದೆ. ಆದರೆ, ನೆರೆಯ ಕೇರಳದಲ್ಲಿ ಈಗಲೂ ಈ ಟ್ರೆಂಡ್ ಇದೆ. ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂನಿಂದ ಹಿಡಿದು ಇತ್ತಿಚೆಗೆ ಬಿಡುಗಡೆಯಾದ ಪೊನ್ಮನ್ ( Ponman ) ತನಕ ಹಲವು ಸಿನಿಮಾಗಳು ಜನಪ್ರಿಯ ಕೃತಿಗಳನ್ನು ಆಧರಿಸಿವೆ. ಒಳ್ಳೆಯ ಕಥೆಗೆ ಮಾಲಿವುಡ್ನಲ್ಲಿ ಆದ್ಯತೆ ನೀಡಲಾಗುತ್ತದೆ. ಮಧು ಮತ್ತು ಶೀಲಾ ಅವರ ಕಾಲಾತೀತ ಕ್ಲಾಸಿಕ್ ಚೆಮ್ಮೀನ್ ಸಿನಿಮಾದಿಂದ ಪೃಥ್ವಿರಾಜ್ ಸುಕುಮಾರನ್ ಅವರ ಆಡುಜೀವಿತಂವರೆಗೆ ಹಲವು ಸಿನಿಮಾಗಳು ಕಾದಂಬರಿ ಆಧರಿತವಾಗಿವೆ. ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಪೊನ್ಮನ್ ಸಿನಿಮಾ ಕೂಡ ಕಾದಂಬರಿ ಆಧರಿತವಾಗಿದೆ. ಈ ರೀತಿ ಪುಸ್ತಕ ಅಥವಾ ಕಾದಂಬರಿ ಆಧರಿತ ಕಥೆಗಳನ್ನು ಹೊಂದಿರುವ ಕೆಲವು ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.
ಬಾಸಿಲ್ ಜೋಸೆಫ್, ಸಜಿನ್ ಗೋಪು ಮತ್ತು ಲಿಜೋಮೋಲ್ ಜೋಸ್ ನಟನೆಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.