ಭಾರತ, ಮಾರ್ಚ್ 12 -- Malayalam Movies: ಮೊದಲೆಲ್ಲ ಕನ್ನಡ ಸಿನಿಮಾಗಳು ಜನಪ್ರಿಯ ಕಾದಂಬರಿಗಳನ್ನು ಆಧರಿಸಿರುತ್ತಿದ್ದವು. ಆದರೆ, ಕನ್ನಡದಲ್ಲಿ ಈಗ ಕಾದಂಬರಿ ಆಧರಿತ ಸಿನಿಮಾಗಳು ಬರುವುದು ಕಡಿಮೆಯಾಗಿದೆ. ಆದರೆ, ನೆರೆಯ ಕೇರಳದಲ್ಲಿ ಈಗಲೂ ಈ ಟ್ರೆಂಡ್‌ ಇದೆ. ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂನಿಂದ ಹಿಡಿದು ಇತ್ತಿಚೆಗೆ ಬಿಡುಗಡೆಯಾದ ಪೊನ್ಮನ್‌ ( Ponman ) ತನಕ ಹಲವು ಸಿನಿಮಾಗಳು ಜನಪ್ರಿಯ ಕೃತಿಗಳನ್ನು ಆಧರಿಸಿವೆ. ಒಳ್ಳೆಯ ಕಥೆಗೆ ಮಾಲಿವುಡ್‌ನಲ್ಲಿ ಆದ್ಯತೆ ನೀಡಲಾಗುತ್ತದೆ. ಮಧು ಮತ್ತು ಶೀಲಾ ಅವರ ಕಾಲಾತೀತ ಕ್ಲಾಸಿಕ್ ಚೆಮ್ಮೀನ್ ಸಿನಿಮಾದಿಂದ ಪೃಥ್ವಿರಾಜ್ ಸುಕುಮಾರನ್ ಅವರ ಆಡುಜೀವಿತಂವರೆಗೆ ಹಲವು ಸಿನಿಮಾಗಳು ಕಾದಂಬರಿ ಆಧರಿತವಾಗಿವೆ. ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಪೊನ್ಮನ್‌ ಸಿನಿಮಾ ಕೂಡ ಕಾದಂಬರಿ ಆಧರಿತವಾಗಿದೆ. ಈ ರೀತಿ ಪುಸ್ತಕ ಅಥವಾ ಕಾದಂಬರಿ ಆಧರಿತ ಕಥೆಗಳನ್ನು ಹೊಂದಿರುವ ಕೆಲವು ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.

ಬಾಸಿಲ್ ಜೋಸೆಫ್, ಸಜಿನ್ ಗೋಪು ಮತ್ತು ಲಿಜೋಮೋಲ್ ಜೋಸ್ ನಟನೆಯ...