ಭಾರತ, ಮಾರ್ಚ್ 30 -- Mahanati Auditions: ಜೀ ಕನ್ನಡ ಸದ್ಯ ಬ್ಯಾಕ್‌ ಟು ಬ್ಯಾಕ್‌ ರಿಯಾಲಿಟಿ ಶೋಗಳ ಜತೆಗೆ ಹೊಸ ಹೊಸ ಸೀರಿಯಲ್‌ಗಳನ್ನೂ ಕನ್ನಡಿಗರಿಗೆ ಪರಿಚಯಿಸಲು ತುದಿಗಾಲ ಮೇಲೆ ನಿಂತಿದೆ. ಈಗಾಗಲೇ ವಾರಾಂತ್ಯದಲ್ಲಿ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಮತ್ತು ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋ ಜನಮನ ಗೆದ್ದಿದೆ. ಟಿಆರ್‌ಪಿ ವಿಚಾರದಲ್ಲಿಯೂ ಈ ಎರಡು ಶೋಗಳು ನಂಬರ್‌ 1 ಮತ್ತು ನಂಬರ್‌ 2 ಸ್ಥಾನದಲ್ಲಿವೆ. ಹೀಗಿರುವಾಗಲೇ ಇದೀಗ ಕಳೆದ ವರ್ಷದಿಂದ ಆರಂಭವಾಗಿದ್ದ ಮಹಾನಟಿ ರಿಯಾಲಿಟಿ ಶೋ ಇದೀಗ ಎರಡನೇ ಸೀಸನ್‌ ಮೂಲಕ ಆಗಮಿಸುತ್ತಿದೆ. ಆಡಿಷನ್‌ಗೂ ದಿನಾಂಕ ನಿಗದಿಯಾಗಿದೆ.

ನಟಿಯಾಗಬೇಕು, ಸಿನಿಮಾ ಸೀರಿಯಲ್‌ಗಳಲ್ಲಿ ನಟಿಸಬೇಕು, ಬಣ್ಣದ ಲೋಕದಲ್ಲಿ ಬೆಳಗಬೇಕು ಎಂದು ಎಷ್ಟೋ ಮಂದಿ ಕನಸು ಕಟ್ಟಿಕೊಂಡಿರುತ್ತಾರೆ. ಆ ರೀತಿ ಕನಸು ಕಂಡ ಯುವತಿಯರಿಗೆ ದೊಡ್ಡ ವೇದಿಕೆ ಈ ಮಹಾನಟಿ. ಈಗಾಗಲೇ ಮೊದಲ ಸೀಸಿನ್‌ನಲ್ಲಿ ಗಮನ ಸೆಳೆದ ಎಷ್ಟೋ ಮಹಾನಟಿಯರು ಈಗಾಗಲೇ ಒಂದಿಲ್ಲೊಂದು ಸೀರಿಯಲ್‌, ಸಿನಿಮಾ ಅವಕಾಶ ಗಿಟ್ಟಿಸಿಕೊಂಡು ಕಂಡ ಕನಸನ್ನು ನನಸು ಮಾಡ...