ಭಾರತ, ಏಪ್ರಿಲ್ 5 -- Madhur Temple: ಮಧೂರು ಸಿದ್ಧಿವಿನಾಯಕನಿಗೆ ಐತಿಹಾಸಿಕ ಮೂಡಪ್ಪ ಸೇವೆ ಇಂದು (ಏಪ್ರಿಲ್ 5, ಶನಿವಾರ) ನಡೆಯಲಿದ್ದು, 33 ವರ್ಷಗಳ ಬಳಿಕ ನಡೆಯುವ ಈ ಐತಿಹಾಸಿಕ ಕ್ಷಣಕ್ಕೆ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಭಾಗವಾಗಿ ನಡೆಯುವ ಮೂಡಪ್ಪ ಸೇವೆಗಾಗಿ ಸಕಲ ಸಿದ್ಧತೆಗಳು ನಡೆದಿವೆ. ದೇವರ ಸೇವೆಗಾಗಿ 16 ಮುಡಿಯ ಅಪ್ಪವನ್ನು ತಯಾರಿಸಲು 20ಕ್ಕೂ ಅಧಿಕ ಬಾಣಸಿಗರು ಪಿ.ಕೆ. ಧನಂಜಯ ಭಟ್ ಪಡು ಕಕ್ಕೆಪ್ಪಾಡಿ ಅವರ ನೇತೃತ್ವದಲ್ಲಿ ಸಜ್ಜಾಗಿದ್ದಾರೆ.
ಇಂದು ಬೆಳಗ್ಗೆ ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ ನಡೆದಿದ್ದು, ಬಳಿಕ ಅಪ್ಪ ತಯಾರಿ ಆರಂಭಗೊಂಡಿದೆ. ಬೆಳಗ್ಗೆ ದೇವರಿಗೆ ಕಲಶಾಭಿಷೇಕ ಮಾಡಿ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ ಬಳಿಕ ತಂತ್ರವರ್ಯರು ಅರಿಕೊಟ್ಟಿಗೆ ಪ್ರವೇಶಿಸಿ, ಕೆಲವು ಧಾರ್ಮಿಕ ವಿಧಿ ವಿಧಾನ ನಡೆಸಿದ್ದಾರೆ. ಬಳಿಕ ದೇವರ ನಂದಾದೀಪದಿಂದ ಅಗ್ನಿಪ್ರತಿಷ್ಠೆ ಮಾಡಲಾಯಿತು. ಹೊಸ ಕಾವಲಿಯನ್ನು ಇಟ್ಟು, ಗಣಪತಿ ಪ್ರಾರ್ಥನೆ ಮಾಡಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.