Bengaluru, ಏಪ್ರಿಲ್ 8 -- ಬೆಂಗಳೂರು: ಜನಪ್ರಿಯ ವೃತ್ತಿಪರ ಜಾಲವಾದ ಲಿಂಕ್ಡ್ ಇನ್ 2025ರ ಭಾರತದ ಉನ್ನತ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ 25 ಕಂಪನಿಗಳನ್ನು ಹೆಸರಿಸಲಾಗಿದೆ. ಲಿಂಕ್ಡ್ ಇನ್ ಪ್ಲಾಟ್ಫಾರ್ಮ್ನಲ್ಲಿ ಲಕ್ಷಾಂತರ ವೃತ್ತಿಪರರ ಚಟುವಟಿಕೆಯ ಆಧಾರದ ಮೇಲೆ ರೂಪಿಸಲಾಗಿರುವ ಈ ಪಟ್ಟಿಯು ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮುಂದಿನ ಉದ್ಯೋಗಾವಕಾಶವನ್ನು ಹುಡುಕಲು ಸಹಾಯ ಮಾಡುವಂತೆ ರೂಪುಗೊಂಡಿದೆ. ಜೊತೆಗೆ ಈ ಪಟ್ಟಿಯು ಬೇಡಿಕೆಯಲ್ಲಿರುವ ಕೌಶಲ್ಯಗಳು, ಟಾಪ್ ಲೊಕೇಷನ್ಗಳು ಮತ್ತು ಈ ಉನ್ನತ ಕಂಪನಿಗಳಲ್ಲಿನ ಪ್ರಮುಖ ಉದ್ಯೋಗ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.
ಅಭಿವೃದ್ಧಿ ಹೊಂದಬಹುದಾದ ಸಾಮರ್ಥ್ಯ, ಕೌಶಲ್ಯ ಅಭಿವೃದ್ಧಿ, ಹೊರಗಿನ ಅವಕಾಶಗಳು ಮತ್ತು ಕಂಪನಿಯ ಮೇಲಿನ ಒಲವು ಸೇರಿದಂತೆ ಒಟ್ಟು ಎಂಟು ಅಂಶಗಳ ಆಧಾರದಲ್ಲಿ ಲಿಂಕ್ಡ್ ಇನ್ ಡೇಟಾವನ್ನು ಬಳಸಿಕೊಂಡ ರೂಪಿಸಲಾದ ಈ ಪಟ್ಟಿಯು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಿಗಳ ಮೇಲೆ ಹೂಡಿಕೆ ಮಾಡುತ್ತಿರುವ ಮತ್ತು ಈಗ ತೀವ್ರ ಗತಿಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.