Bengaluru, ಏಪ್ರಿಲ್ 8 -- ಬೆಂಗಳೂರು: ಜನಪ್ರಿಯ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್ 2025ರ ಭಾರತದ ಉನ್ನತ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ 25 ಕಂಪನಿಗಳನ್ನು ಹೆಸರಿಸಲಾಗಿದೆ. ಲಿಂಕ್ಡ್ ಇನ್ ಪ್ಲಾಟ್‌ಫಾರ್ಮ್‌ನಲ್ಲಿ ಲಕ್ಷಾಂತರ ವೃತ್ತಿಪರರ ಚಟುವಟಿಕೆಯ ಆಧಾರದ ಮೇಲೆ ರೂಪಿಸಲಾಗಿರುವ ಈ ಪಟ್ಟಿಯು ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮುಂದಿನ ಉದ್ಯೋಗಾವಕಾಶವನ್ನು ಹುಡುಕಲು ಸಹಾಯ ಮಾಡುವಂತೆ ರೂಪುಗೊಂಡಿದೆ. ಜೊತೆಗೆ ಈ ಪಟ್ಟಿಯು ಬೇಡಿಕೆಯಲ್ಲಿರುವ ಕೌಶಲ್ಯಗಳು, ಟಾಪ್ ಲೊಕೇಷನ್‌ಗಳು ಮತ್ತು ಈ ಉನ್ನತ ಕಂಪನಿಗಳಲ್ಲಿನ ಪ್ರಮುಖ ಉದ್ಯೋಗ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.

ಅಭಿವೃದ್ಧಿ ಹೊಂದಬಹುದಾದ ಸಾಮರ್ಥ್ಯ, ಕೌಶಲ್ಯ ಅಭಿವೃದ್ಧಿ, ಹೊರಗಿನ ಅವಕಾಶಗಳು ಮತ್ತು ಕಂಪನಿಯ ಮೇಲಿನ ಒಲವು ಸೇರಿದಂತೆ ಒಟ್ಟು ಎಂಟು ಅಂಶಗಳ ಆಧಾರದಲ್ಲಿ ಲಿಂಕ್ಡ್‌ ಇನ್ ಡೇಟಾವನ್ನು ಬಳಸಿಕೊಂಡ ರೂಪಿಸಲಾದ ಈ ಪಟ್ಟಿಯು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಿಗಳ ಮೇಲೆ ಹೂಡಿಕೆ ಮಾಡುತ್ತಿರುವ ಮತ್ತು ಈಗ ತೀವ್ರ ಗತಿಯ...