ಭಾರತ, ಫೆಬ್ರವರಿ 27 -- ವೈಷ್ಣವ್ ಲಕ್ಷ್ಮೀ ಜತೆಗೂಡಿಕೊಂಡು ವಿಧಿ ಮದುವೆಗೆ ಹೋಗುತ್ತಿದ್ದಾನೆ ಎಂಬ ವಿಚಾರವನ್ನೇ ಕಾವೇರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅವರಿಬ್ಬರು ಒಟ್ಟಾಗಿ ಮದುವೆಗೆ ಹೋದ ವಿಚಾರವನ್ನೇ ನೆನಪು ಮಾಡಿಕೊಂಡು ಅವಳು ಗಿಡಕ್ಕೆ ನೀರುಣಿಸುತ್ತಾ ಇರುತ್ತಾಳೆ. ನೀರು ನೆಲಕ್ಕೆ ಚೆಲ್ಲುತ್ತಿದ್ದರೂ ಅವಳಿಗೆ ಗೊತ್ತಾಗೋದಿಲ್ಲ.

"ನನಗೇ ಗೊತ್ತಿಲ್ಲದೆ ಈ ಮನೆಯಲ್ಲಿ ನನ್ನ ಬೆನ್ನ ಹಿಂದೆ ಏನಾದರೂ ನಡೆಯುತ್ತಿದೆಯೇ?" ಎಂಬ ಪ್ರಶ್ನೆ ಅವಳಲ್ಲಿ ಮೂಡಿದೆ.

"ವೈಷ್ಣವ್ ಲಕ್ಷ್ಮೀಯನ್ನು ಪ್ರೀತಿಸುವಷ್ಟು ನನ್ನನ್ನು ಪ್ರೀತಿಸದ ಕಾರಣ ಅವನು ಇಂದು ನನ್ನನ್ನು ಬಿಟ್ಟು ಹೋಗಿದ್ದಾನೆಯೇ?" ಹೀಗೆಲ್ಲ ಅವಳು ಯೋಚನೆ ಮಾಡುತ್ತಾಳೆ.

ಅಷ್ಟರಲ್ಲಿ ಈ ಹಿಂದೆಯೇ ಸತ್ತು ಹೋದ ಅವಳ ಅತ್ತೆಯ ಬಿಂಬ ಅವಳೆದುರು ಬಂದು ಮಾತಾಡಲು ಆರಂಭಿಸುತ್ತದೆ. ಕಾವೇರಿ ಮಾಡುತ್ತಿರುವುದು ತಪ್ಪು ಎಂಬ ಸೂಚನೆಯನ್ನು ಆ ಬಿಂಬ ನೀಡುತ್ತದೆ.

ಕಾವೇರಿ ತನ್ನ ಮಗ ವೈಷ್ಣವ್ ಸಲುವಾಗಿ ಏನು ಬೇಕಾದರೂ ಮಾಡಲು ರೆಡಿ ಇದ್ದೇನೆ ಎಂದು ಹೇಳಿಕೊಳ್ಳುತ್ತಾಳೆ. ಅತ್ತೆಯ ಬ...