ಭಾರತ, ಮಾರ್ಚ್ 29 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಕಾವೇರಿ ಮಾತು ಕೇಳಿ ತನ್ನ ಪತ್ನಿ ಲಕ್ಷ್ಮೀಗೆ ಮೋಸ ಮಾಡುತ್ತಿದ್ದಾನೆ. ಕಾವೇರಿ ಹೇಳಿದ ಕಾರಣಕ್ಕೆ ಅವನು ಇನ್ನೊಂದು ಹುಡುಗಿ ಜತೆ ತನ್ನ ಸಂಸಾರ ಕಟ್ಟಿಕೊಳ್ಳಲು ತಯಾರಾಗಿದ್ದಾನೆ. ಸಾಕಷ್ಟು ಜನ ಅವನಿಗೆ ಈ ಮದುವೆ ಆಗೋದು ಬೇಡ ಎಂದರೂ ಸಹ ಅವನು ಕಾವೇರಿ ಮಾತನ್ನು ಮಾತ್ರ ಕೇಳುತ್ತಿದ್ದಾನೆ. ವೈಷ್ಣವ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ ಎನ್ನುವುದನ್ನು ಸುಪ್ರಿತಾ ನೇರವಾಗಿ ಸಾಕಷ್ಟು ಬಾರಿ ಹೇಳಿದ್ದಾಳೆ. ಆದರೆ ಅವನು ಕೇಳಿಲ್ಲ. ಆ ಕಾರಣಕ್ಕಾಗಿ ಈಗ ಇನ್ನಷ್ಟು ಚುರುಕು ಮುಟ್ಟಿಸುತ್ತಿದ್ದಾಳೆ.

ಸುಪ್ರಿತಾ ಒಂದು ವೈಷ್ಣವ್ ಕೆನ್ನೆಗೆ ಏಟು ಕೊಟ್ಟಿದ್ದಾಳೆ. ಆದರೆ, ಸುಪ್ರಿತಾ ಯಾಕೆ ವೈಷ್ಣವ್‌ಗೆ ಹೊಡೆದಿದ್ಧಾಳೆ ಎಂಬುದು ಮೊದಲು ವೈಷ್ಣವ್‌ಗೆ ಅರ್ಥ ಆಗುವುದಿಲ್ಲ. ಆ ನಂತರದಲ್ಲಿ ಸುಪ್ರಿತಾ ಒಂದು ಸನ್ನಿವೇಷವನ್ನು ನೆನಪಿಸುತ್ತಾಳೆ. "ನೀನು ಶಾಲೆಗೆ ಹೋಗುವ ಸಂದರ್ಭದಲ್ಲೂ ನಾನು ನಿನ್ನ ಕೆನ್ನೆಗೊಮ್ಮೆ ಹೊಡೆದಿದ್ದೆ. ಯಾಕೆಂದರೆ ಆಗ ನೀನು ಇನ್ಯಾರದೋ ಪೆನ್ಸಿಲ್ ಕದ್ದು ತ...