ಭಾರತ, ಫೆಬ್ರವರಿ 6 -- Lakshmi Baramma Serial: 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಹಲವು ವರ್ಷಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಒಂದೇ ಹೆಸರಿನಲ್ಲಿ ಎರಡು ಬೇರೆ ಬೇರೆ ಧಾರಾವಾಹಿಗಳು ತೆರೆ ಕಂಡಿವೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳನ್ನು ಪೂರ್ಣಗೊಳಿಸಿತ್ತು, ಇಂದಿಗೂ ಆ ಕಲಾವಿದರನ್ನು ಗುರುತು ಹಿಡಿದು ಮಾತನಾಡಿಸುವ ಜನರಿದ್ದಾರೆ. ಲಚ್ಚಿ, ಗೊಂಬೆ, ಚಂದು ಎಂದು ಮಾತನಾಡಿಸುತ್ತಾರೆ. ಆ ಮಟ್ಟಿಗಿನ ಜನಪ್ರಿಯತೆಯನ್ನು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಗಳಿಸಿತ್ತು. ಇಂದಿಗೂ ಅದೇ ಹೆಸರಿನಲ್ಲಿ ಇನ್ನೊಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಟಿಆರ್‍‌ಪಿ ಓಟದಲ್ಲೂ ಈ ಧಾರಾವಾಹಿ ಮುಂದಿದೆ. 'ಲಕ್ಷ್ಮೀ ಬಾರಮ್ಮ' ಎಂಬ ಹೆಸರು ಹಾಗೂ ಕಥೆ ಎರಡೂ ಸೀರಿಯಲ್ ಗೆಲುವಿಗೆ ಕಾರಣವಾಗುತ್ತಿದೆ.

ಈಗ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವೈಷ್ಣವ್, ಲಕ್ಷ್ಮೀ , ಕೀರ್ತಿ ಎಂಬ ಮೂರು ಮುಖ್ಯ ಪಾತ್ರಗಳಿವೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಧಾ...