Bengaluru, ಮಾರ್ಚ್ 20 -- L2 Empuraan Trailer: ಮಲಯಾಳಂನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ʻಎಲ್2; ಎಂಪುರಾನ್ʼ ಸಿನಿಮಾ ಟ್ರೇಲರ್ ಮಧ್ಯರಾತ್ರಿ (ಮಾ. 20) ಬಿಡುಗಡೆ ಆಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಬಹುಕೋಟಿ ಬಜೆಟ್ನ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹುತಾರಾಗಣದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಇದೇ ಮಾರ್ಚ್ 27ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ.
ಎಂಪುರಾನ್ ಸಿನಿಮಾದ ಟ್ರೇಲರ್ನಲ್ಲಿ ಖುರೇಷಿ ಅಬ್ರಾಮ್ ಮತ್ತು ಸ್ಟೀಫನ್ ನೆಡುಂಪಲ್ಲಿ ಎರಡು ಶೇಡ್ಗಳಲ್ಲಿ ಮೋಹನ್ಲಾಲ್ ಕಾಣಿಸಿಕೊಂಡಿದ್ದಾರೆ. ರಾಜಕೀಯ ಥ್ರಿಲ್ಲರ್ ಕಥಾಹಂದರದ ಈ ಸಿನಿಮಾ ರಾಜಕೀಯ ಪಕ್ಷದೊಳಗಿನ ಅಧಿಕಾರದ ಸುತ್ತ ಸುತ್ತಲಿದೆ. ಇದೆಲ್ಲದರ ಜತೆಗೆ ಭಯೋತ್ಪಾದನೆ, ಡ್ರಗ್ಸ್ ಇನ್ನೂ ಹಲವು ಪದರಗಳಲ್ಲಿ ಈ ಸಿನಿಮಾ ತೆರೆದುಕೊಳ್ಳಲಿದೆ. ಖುರೇಷಿ ಪಾತ್ರದಲ್ಲಿ ಮೋಹನ್ ಲಾಲ್, ಜಾಯೆದ್ ಮಸೂದ್ ಪಾತ್ರದಲ್ಲಿ ಪೃಥ್ವಿರಾಜ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.