ಭಾರತ, ಮಾರ್ಚ್ 21 -- ಕುರ್ತಾ, ಚೂಡಿದಾರ ಹೊಲಿಸುವಾಗ ಸ್ಲೀವ್‌ ಡಿಸೈನ್‌ ಮೇಲೆ ಹೆಚ್ಚು ಗಮನ ಕೊಡಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ಲೀವ್ ಡಿಸೈನ್ ಟ್ರೆಂಡ್‌ ಸೃಷ್ಟಿಸುತ್ತಿವೆ. ಸ್ಟೈಲಿಶ್ ಆಗಿ ತ್ರಿ ಫೋರ್ಥ್ ಸ್ಲೀವ್ ಇಡಿಸುವುದು ಈಗಿನ ಟ್ರೆಂಡ್‌. ಹಾಗಾದ್ರೆ ಇದಕ್ಕೆ ಡಿಸೈನ್ ಎಲ್ಲಿದೆ ಅಂತೀರಾ, ಇಲ್ಲಿವೆ ನೋಡಿ 7 ವಿಭಿನ್ನ ಕುರ್ತಾ ಸ್ಲೀವ್ ಡಿಸೈನ್‌ಗಳು. ಇವು ಒಂದಕ್ಕಿಂತ ಒಂದು ಭಿನ್ನ. ಈ ಡಿಸೈನ್ ನಿಮಗೆ ಆಕರ್ಷಕ ನೋಟ ಸಿಗುವಂತೆ ಮಾಡೋದು ಖಂಡಿತ.

ತ್ರಿ ಪೋರ್ಥ್‌ ತೋಳಿಗೆ ಕಟ್ ಡಿಸೈನ್ ಮಾಡಿಸಿ. ಇದರ ಮೇಲೆ ಚಿಮುಕಿಗಳಿಂದ ಚುಕ್ಕಿ ಇರಿಸಿ. ಸುತ್ತಲೂ ಡ್ರೆಸ್‌ನ ಬಣ್ಣಕ್ಕೆ ಹೊಂದುವ ಬಟ್ಟೆಗಳಿಂದ ಸ್ವಿಚ್‌ ಹಾಕಿಸಿ. ಈ ಡಿಸೈನ್ ಕುರ್ತಾಗೆ ಮಾತ್ರವಲ್ಲ ಚೂಡಿದಾರ್‌ಗೂ ಹೊಂದುತ್ತದೆ. ಕಾಲೇಜು ಹುಡುಗಿಯರಿಗೆ ಇದು ಒಪ್ಪುತ್ತದೆ.

ನೀವು ಸಿಂಪಲ್ ಆಗಿದ್ದೂ, ಟ್ರೆಂಡಿ ಆಗಿರುವ ಡಿಸೈನ್ ಮಾಡಿಸಬೇಕು ಅಂತಿದ್ದರೆ ಈ ಡಿಸೈನ್ ಗಮನಿಸಿ. ಇದು ಇಂದು, ಇಂದು, ಎಂದೆಂದಿಗೂ ಟ್ರೆಂಡ್ ಆಗಿರುವ ಡಿಸೈನ್. ಇದು ನಿಮ್ಮ ಕುರ್ತಾ ಸ್ಟೈಲಿ...