Bengaluru, ಫೆಬ್ರವರಿ 13 -- Kingdom Teaser: ಟಾಲಿವುಡ್‌ನ ಖ್ಯಾತ ನಿರ್ದೇಶಕ ಗೌತಮ್ ತಿನ್ನನುರಿ ನಿರ್ದೇಶನದ ವಿಜಯ್ ದೇವರಕೊಂಡ ಅವರ #VD12 ಚಿತ್ರಕ್ಕೆ 'ಕಿಂಗ್ ಡಮ್' ಎಂದು ಟೈಟಲ್‌ ಇಡಲಾಗಿದೆ. ಶೀರ್ಷಿಕೆ ಅದ್ಭುತವಾಗಿದ್ದರೆ.. ಚಿತ್ರ ತಂಡದ ಎರಡು ನಿಮಿಷಗಳ ಟೀಸರ್ ಮತ್ತೊಂದು ಹಂತದಲ್ಲಿದೆ. ಜೂನಿಯರ್ ಎನ್‌ಟಿಆರ್ ಅವರ ಹಿನ್ನೆಲೆ ಧ್ವನಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಬಿಜಿಎಂ ಟೀಸರ್‌ನ ಮೆರುಗು ಹೆಚ್ಚಿಸಿದೆ. ಈ ಚಿತ್ರವು ಈ ವರ್ಷದ ಮೇ 30ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಗೌತಮ್ ತಿನ್ನನುರಿ ಕಾಂಬಿನೇಷನ್‌ನ ಕಿಂಗ್ ಡಮ್ ಸಿನಿಮಾ ಬಹುತೇಕ ಕೊನೇ ಹಂತದ ಕೆಲಸಗಳಲ್ಲಿ ಬಿಜಿಯಾಗಿದೆ. ಬುಧವಾರ (ಫೆಬ್ರವರಿ 12) ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಜೂನಿಯರ್ ಎನ್‌ಟಿಆರ್‌ ಅವರ ಹಿನ್ನೆಲೆ ಧ್ವನಿಯೇ ವಿಶೇಷ. ಅನಿರುದ್ಧ್ ರವಿಚಂದರ್ ಖಡಕ್‌ ಹಿನ್ನೆಲೆ ಸಂಗೀತ ಮೋಡಿ ಮಾಡಿದೆ. ಹಾಲಿವುಡ್ ರೇಂಜ್ ದೃಶ್ಯಗಳು, ಸಾಹಸ ದೃಶ್ಯಗಳು ಅಷ್ಟೇ ಪ್ರಭಾವಶಾಲಿಯಾಗಿವೆ. ಹೀಗೆ ಮೂ...