Bengaluru, ಏಪ್ರಿಲ್ 14 -- KGF Chapter 3:‌ ಕನ್ನಡದ ಹೆಮ್ಮೆಯ ʻಕೆಜಿಎಫ್ ಚಾಪ್ಟರ್‌ 2ʼ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್‌ 14) ಮೂರು ವರ್ಷಗಳಾದವು. ಬಾಕ್ಸ್‌ ಆಫೀಸ್‌ನಲ್ಲಿ ಹಲವು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡ ಈ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿ ದೊಡ್ಡ ಮೈಲಿಗಲ್ಲು ತಲುಪಿತ್ತು. ರಾಕಿಂಗ್‌ ಸ್ಟಾರ್‌ ಯಶ್‌ ಕೆರಿಯರ್‌ಗೂ ಈ ʻಕೆಜಿಎಫ್ ಚಾಪ್ಟರ್‌ 2ʼ ದೊಡ್ಡ ಹಿಟ್‌ ನೀಡಿತ್ತು. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಂಗದೂರು ನಿರ್ಮಾಣ ಮಾಡಿದ ಈ ಸಿನಿಮಾವನ್ನು ಪ್ರಶಾಂತ್‌ ನೀಲ್‌ ನಿರ್ದೇಶನ ಮಾಡಿದರೆ, ರವಿ ಬಸ್ರೂರು ಅವರ ಸಂಗೀತ, ಭುವನ್‌ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್‌ ಕಲಾನಿರ್ದೇಶನ ಚಿತ್ರದ ಯಶಸ್ಸಿಗೆ ಸಾಥ್‌ ನೀಡಿತ್ತು.

ʻಕೆಜಿಎಫ್ ಚಾಪ್ಟರ್‌ 2ʼ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಚಾಪ್ಟರ್‌ 3 ಸುಳಿವು ನೀಡಿದ್ದರು ನಿರ್ದೇಶಕ ಪ್ರಶಾಂತ್‌ ನೀಲ್.‌ ಅದರಂತೆ, ಅಂದಿನಿಂದ ಮೂರನೇ ಭಾಗದ ಮೇಲೆ ದೊಡ್ಡ ನಿರೀಕ್ಷೆ ಮೂಡಿದೆ. ಆದರೆ, ಈ ವರೆಗೂ ಚಾಪ್ಟರ್‌ 3 ಬಗ್ಗೆ ಯಾವುದೇ ಅಪ್‌ಡೇಟ್‌ ಹೊರ...