Bangalore, ಮಾರ್ಚ್ 26 -- Karnataka Toll Rate Hike: ಈಗಾಗಲೇ ವಿದ್ಯುತ್, ಬಸ್ ಪ್ರಯಾಣ, ಮೆಟ್ರೋ ದರ ಏರಿಕೆಯಾಗಿದೆ. ಹಾಲು, ಆಟೋರಿಕ್ಷಾ ಸಹಿತ ವಿವಿಧ ಪ್ರಯಾಣ ದರಗಳು ಏರಿಕೆ ಹಂತದಲ್ಲಿವೆ. ಇದರ ನಡುವೆ ಕರ್ನಾಟಕದಲ್ಲಿ ಸ್ವಂತ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರು ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಹೆಚ್ಚಿನ ದರವನ್ನು ತೆರಬೇಕು. ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ( ಎಚ್ಎಎಐ) ಟೋಲ್ ದರದಲ್ಲಿ ಬದಲಾವಣೆ ಮಾಡಲಿದೆ. ಈಗಿರುವ ಮಾಹಿತಿ ಪ್ರಕಾರದ ಸದ್ಯದ ದರದ ಮೇಲೆ ಶೇ. 3 ರಿಂದ 5ರಷ್ಟು ದರ ಹೆಚ್ಚಳ ಪ್ರಸ್ತಾವನೆಯಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳ ಟೋಲ್ ದರಗಳಲ್ಲಿ ಏರಿಕೆ ಕಾಣಲಿದ್ದು, ಹೆಚ್ಚಿನ ದರವನ್ನು ಹೆದ್ದಾರಿಗಳಲ್ಲಿ ಸಂಚರಿಸಲು ನೀಡಬೇಕಿದೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.