Bangalore, ಮಾರ್ಚ್ 26 -- Karnataka Toll Rate Hike: ಈಗಾಗಲೇ ವಿದ್ಯುತ್‌, ಬಸ್‌ ಪ್ರಯಾಣ, ಮೆಟ್ರೋ ದರ ಏರಿಕೆಯಾಗಿದೆ. ಹಾಲು, ಆಟೋರಿಕ್ಷಾ ಸಹಿತ ವಿವಿಧ ಪ್ರಯಾಣ ದರಗಳು ಏರಿಕೆ ಹಂತದಲ್ಲಿವೆ. ಇದರ ನಡುವೆ ಕರ್ನಾಟಕದಲ್ಲಿ ಸ್ವಂತ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರು ಹೆದ್ದಾರಿ ಟೋಲ್‌ ಪ್ಲಾಜಾದಲ್ಲಿ ಹೆಚ್ಚಿನ ದರವನ್ನು ತೆರಬೇಕು. ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ( ಎಚ್‌ಎಎಐ) ಟೋಲ್‌ ದರದಲ್ಲಿ ಬದಲಾವಣೆ ಮಾಡಲಿದೆ. ಈಗಿರುವ ಮಾಹಿತಿ ಪ್ರಕಾರದ ಸದ್ಯದ ದರದ ಮೇಲೆ ಶೇ. 3 ರಿಂದ 5ರಷ್ಟು ದರ ಹೆಚ್ಚಳ ಪ್ರಸ್ತಾವನೆಯಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳ ಟೋಲ್‌ ದರಗಳಲ್ಲಿ ಏರಿಕೆ ಕಾಣಲಿದ್ದು, ಹೆಚ್ಚಿನ ದರವನ್ನು ಹೆದ್ದಾರಿಗಳಲ್ಲಿ ಸಂಚರಿಸಲು ನೀಡಬೇಕಿದೆ.

Published by HT Digital Content Services with permission from HT Kannada....