Bangalore, ಫೆಬ್ರವರಿ 17 -- Karnataka Budget 2025: ಎರಡು ವಾರದಿಂದಲೂ ಕರ್ನಾಟಕ ಬಜೆಟ್ಗೆ ತಯಾರಿ ನಡೆಸಿರುವ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.ಸೋಮವಾರ ವಿಧಾನಸೌಧದಲ್ಲಿ ಬಜೆಟ್ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾರ್ಚ್ 3 ರಿಂದಲೇ ಕರ್ನಾಟಕದ ವಿಧಾನ ಮಂಡಲ ಬಜೆಟ್ ಅಧೀವೇಶನ ಪ್ರಾರಂಭವಾಗಲಿದೆ. ಮಾರ್ಚ್ 3 ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ವರ್ಷದಲ್ಲಿ ಮೊದಲ ಅಧಿವೇಶನವಾಗಿರುವುದರಿಂದ ಸದನದಲ್ಲಿ ರಾಜ್ಯಪಾಲರ ಭಾಷಣ ಇರಲಿದೆ. ಅಂದು ಕರ್ನಾಟಕ ಸರ್ಕಾರದ ಸಾಧನೆಗಳ ವಿವರಗಳನ್ನು ರಾಜ್ಯಪಾಲರು ನೀಡಲಿದ್ದಾರೆ. ಇದಾದ ನಂತರ ಮಾರ್ಚ್ 7 ರಂದು 2025-26 ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತೇನೆ ಎಂದು ತಿಳಿಸಿದರು.
ಇದಾದ ಬಳಿಕ ಬಜೆಟ್ ಮಂಡನೆ ಬಳಿಕ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ನಂತರ ಬಜೆಟ್ ಕುರಿತಾಗಿಯೂ ಚರ್ಚೆಗಳು ಆಗಲಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.