Bangalore, ಫೆಬ್ರವರಿ 17 -- Karnataka Budget 2025: ಎರಡು ವಾರದಿಂದಲೂ ಕರ್ನಾಟಕ ಬಜೆಟ್‌ಗೆ ತಯಾರಿ ನಡೆಸಿರುವ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.ಸೋಮವಾರ ವಿಧಾನಸೌಧದಲ್ಲಿ ಬಜೆಟ್ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾರ್ಚ್‌ 3 ರಿಂದಲೇ ಕರ್ನಾಟಕದ ವಿಧಾನ ಮಂಡಲ ಬಜೆಟ್‌ ಅಧೀವೇಶನ ಪ್ರಾರಂಭವಾಗಲಿದೆ. ಮಾರ್ಚ್ 3 ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ವರ್ಷದಲ್ಲಿ ಮೊದಲ ಅಧಿವೇಶನವಾಗಿರುವುದರಿಂದ ಸದನದಲ್ಲಿ ರಾಜ್ಯಪಾಲರ ಭಾಷಣ ಇರಲಿದೆ. ಅಂದು ಕರ್ನಾಟಕ ಸರ್ಕಾರದ ಸಾಧನೆಗಳ ವಿವರಗಳನ್ನು ರಾಜ್ಯಪಾಲರು ನೀಡಲಿದ್ದಾರೆ. ಇದಾದ ನಂತರ ಮಾರ್ಚ್ 7 ರಂದು 2025-26 ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತೇನೆ ಎಂದು ತಿಳಿಸಿದರು.

ಇದಾದ ಬಳಿಕ ಬಜೆಟ್ ಮಂಡನೆ ಬಳಿಕ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ನಂತರ ಬಜೆಟ್‌ ಕುರಿತಾಗಿಯೂ ಚರ್ಚೆಗಳು ಆಗಲಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿ...