Bangalore, ಏಪ್ರಿಲ್ 27 -- Karnataka Airports: ಭಾರತದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ 35 ವಿಮಾನ ನಿಲ್ದಾಣಗಳಿವೆ. ಇದರಲ್ಲಿ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಇವೆ. ಕೇರಳ, ತಮಿಳುನಾಡು ಹಾಗೂ ಅವಿಭಹಿತ ಆಂಧ್ರಪ್ರದೇಶದಲ್ಲಿ ತಲಾ ನಾಲ್ಕು,ಮಹಾರಾಷ್ಟ್ರದಲ್ಲಿ ಆರು ವಿಮಾನ ನಿಲ್ದಾಣಗಳು ಅಂತರಾಷ್ಟ್ರೀಯ ದರ್ಜೆಯಲ್ಲಿವೆ. ಕರ್ನಾಟಕದಲ್ಲಿ ಮಾತ್ರ ಬೆಂಗಳೂರು ಮತ್ತು ಮಂಗಳೂರು ಮಾತ್ರ ಈ ಮಾನ್ಯತೆ ಹೊಂದಿದೆ. ಕರ್ನಾಟಕದಲ್ಲಿ ಈ ಹಂತಕ್ಕೆ ಹೋಗಬಲ್ಲ ಇನ್ನೆರಡು ವಿಮಾನ ನಿಲ್ದಾಣಗಳು ಹುಬ್ಬಳ್ಳಿ ಹಾಗೂ ಬೆಳಗಾವಿ. ಈ ಎರಡೂ ವಿಮಾನ ನಿಲ್ದಾಣಗಳನ್ನು ಹಂತ ಹಂತವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನಾಗಿ ರೂಪಿಸಬೇಕು ಎನ್ನುವ ಬೇಡಿಕೆ ಕರ್ನಾಟಕ ಸರ್ಕಾರದ್ದು. ಇದಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಪತ್ರ ವಹಿವಾಟು ಮಾಡುವ ಚಟುವಟಿಕೆಗಳೂ ನಡೆದಿವೆ.
ಕರ್ನಾಟಕದಲ್ಲಿ ಸದ್ಯ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರಗಿ, ಶಿವಮೊಗ್ಗ, ಬೀದರ್, ಬಳ್ಳಾರಿಗೆ ವಿಮಾನ ನಿಲ್ದಾಣ ಸೇವೆಗಳಿವೆ. ಬೆಂಗಳೂರು ಹಾಗೂ ಮಂಗಳೂರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.