Bengaluru, ಮಾರ್ಚ್ 19 -- Nodidavaru Enantare OTT: ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಈ ವರ್ಷದ ಸಿನಿಮಾಗಳಲ್ಲಿ ʻನೋಡಿದವರು ಏನಂತಾರೆʼ ಸಹ ಒಂದು. ಗುಲ್ಟೂ ಸಿನಿಮಾ ಖ್ಯಾತಿಯ ನವೀನ್‌ ಶಂಕರ್‌ ನಾಯಕನಾಗಿ ನಟಿಸಿದ ಈ ಸಿನಿಮಾ, ಇದೇ ವರ್ಷದ ಜನವರಿ 31ರಂದು ತೆರೆಗೆ ಬಂದಿತ್ತು. ಇಂತಿಪ್ಪ ಸಿನಿಮಾ ಇತ್ತೀಚೆಗಷ್ಟೇ 50ನೇ ದಿನದ ಸಂಭ್ರಮ ಆಚರಿಸಿಕೊಂಡಿತ್ತು. ನವೀನ್‌ ಶಂಕರ್‌ ನಟನೆಗೆ, ನಿರ್ದೇಶಕರ ಕಥೆಗೆ ಪ್ರೇಕ್ಷಕ ಫಿದಾ ಆಗಿದ್ದ. ಇನ್ನು ಕೆಲವರು ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಆಗಮಿಸಲಿದೆ ಎಂದೂ ಕಾದಿದ್ದುಂಟು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳಲ್ಲಿ ತುಂಬ ಜಾಗೃತೆ ಮತ್ತು ಜಾಣತನ ಪ್ರದರ್ಶಿಸುತ್ತಿದ್ದಾರೆ. ಅದಕ್ಕೆ ಈ ವರೆಗೆ ಅವರು ನಟಿಸಿದ ಸಿನಿಮಾಗಳೇ ಸಾಕ್ಷಿ. ಆ ಸಾಲಿನಲ್ಲಿ ಸೇರುವ ಮತ್ತೊಂದು ಚಿತ್ರವೇ ʻನೋಡಿದವರು ಏನಂತಾರೆʼ. ಕಾಡುವ ಕಥೆಯೊಂದನ್ನು ಹೊತ್ತು ನಿರ್ದೇಶಕ ಕುಲದೀಪ್ ಕಾರಿಯಪ್ಪ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈಗ ಇದೇ ಸಿನಿಮಾ ಇನ್ನಷ...