Bengaluru, ಮಾರ್ಚ್ 5 -- Kalghatgi Cradle: ಕಲಘಟಗಿ, ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಮಲೆನಾಡ ಸೆರಗಿನ ಅಂಚಿನಲ್ಲಿನ ಒಂದು ಪುಟ್ಟ ತಾಲೂಕು. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಕೆ ಮಾಡಿದರೆ, ಹಸಿರುಟ್ಟ ಪ್ರದೇಶ. ಇಂತಿಪ್ಪ ಕಲಘಟಗಿ, ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿದೆ. ಅದಕ್ಕೆ ಕಾರಣ; ಇಲ್ಲಿನ ಬಣ್ಣದ ತೊಟ್ಟಿಲು. ಇಲ್ಲಿನ ಚಿತ್ರಗಾರ ಓಣಿಯಲ್ಲಿರುವ ಸಾವಕಾರ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಈ ಕಲೆಯನ್ನು ಪೋಷಿಸುತ್ತ, ಎಲ್ಲೆಡೆ ಕಲಘಟಗಿಯ ಘಮ ಸೂಸುತ್ತ ತೆರೆಮರೆಯಲ್ಲಿ ಈ ಕಾಯಕ ಮಾಡುತ್ತ ಬರುತ್ತಿದೆ. ಸಿನಿಮಾ ಕಲಾವಿದರಿಂದ ಹಿಡಿದು, ರಾಜಕಾರಣಿಗಳೂ ಇವರ ತೊಟ್ಟಿಲನ್ನು ಕೊಂಡೊಯ್ದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಈ ತೊಟ್ಟಿಲು ತಯಾರಕ ಸಾವಕಾರ ಕುಟುಂಬಕ್ಕೆ ಮಾತ್ರ ಸರ್ಕಾರ ಕಣ್ಣೆತ್ತಿಯೂ ನೋಡುತ್ತಿಲ್ಲ.
ಕಳೆದ ನಾಲ್ಕು ತಲೆಮಾರುಗಳಿಂದ ಬಣ್ಣದ ತೊಟ್ಟಿಲನ್ನು ಮಾಡುತ್ತಿರುವ ಸಾವಕಾರ ಕುಟುಂಬ, ಇದೀಗ ಇದೇ ಕುಟುಂಬದ ಶ್ರೀಧರ್ ಸಾವಕಾರ ಎಂಬುವವರು ಮಾತ್ರ ಈ ಕಾಯಕವನ್ನು ಮುಂದುವರಿಸಿಕೊಂಡು ಹೋ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.