Bengaluru, ಮಾರ್ಚ್ 5 -- Kalghatgi Cradle: ಕಲಘಟಗಿ, ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಮಲೆನಾಡ ಸೆರಗಿನ ಅಂಚಿನಲ್ಲಿನ ಒಂದು ಪುಟ್ಟ ತಾಲೂಕು. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಕೆ ಮಾಡಿದರೆ, ಹಸಿರುಟ್ಟ ಪ್ರದೇಶ. ಇಂತಿಪ್ಪ ಕಲಘಟಗಿ, ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿದೆ. ಅದಕ್ಕೆ ಕಾರಣ; ಇಲ್ಲಿನ ಬಣ್ಣದ ತೊಟ್ಟಿಲು. ಇಲ್ಲಿನ ಚಿತ್ರಗಾರ ಓಣಿಯಲ್ಲಿರುವ ಸಾವಕಾರ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಈ ಕಲೆಯನ್ನು ಪೋಷಿಸುತ್ತ, ಎಲ್ಲೆಡೆ ಕಲಘಟಗಿಯ ಘಮ ಸೂಸುತ್ತ ತೆರೆಮರೆಯಲ್ಲಿ ಈ ಕಾಯಕ ಮಾಡುತ್ತ ಬರುತ್ತಿದೆ. ಸಿನಿಮಾ ಕಲಾವಿದರಿಂದ ಹಿಡಿದು, ರಾಜಕಾರಣಿಗಳೂ ಇವರ ತೊಟ್ಟಿಲನ್ನು ಕೊಂಡೊಯ್ದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಈ ತೊಟ್ಟಿಲು ತಯಾರಕ ಸಾವಕಾರ ಕುಟುಂಬಕ್ಕೆ ಮಾತ್ರ ಸರ್ಕಾರ ಕಣ್ಣೆತ್ತಿಯೂ ನೋಡುತ್ತಿಲ್ಲ.

ಕಳೆದ ನಾಲ್ಕು ತಲೆಮಾರುಗಳಿಂದ ಬಣ್ಣದ ತೊಟ್ಟಿಲನ್ನು ಮಾಡುತ್ತಿರುವ ಸಾವಕಾರ ಕುಟುಂಬ, ಇದೀಗ ಇದೇ ಕುಟುಂಬದ ಶ್ರೀಧರ್‌ ಸಾವಕಾರ ಎಂಬುವವರು ಮಾತ್ರ ಈ ಕಾಯಕವನ್ನು ಮುಂದುವರಿಸಿಕೊಂಡು ಹೋ...