ಭಾರತ, ಮಾರ್ಚ್ 12 -- ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಶಿರಡಿ (Shirdi) ಸಾಯಿಬಾಬಾ ಮಂದಿರ ಕೂಡಾ ಒಂದು. ಮಹರಾಷ್ಟ್ರದಲ್ಲಿರುವ ಈ ದೇವಾಲಯವು ಎಲ್ಲಾ ಜಾತಿ ಮತ್ತು ಧರ್ಮದ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ. ಶಿರಡಿ ಸಾಯಿಬಾಬಾ ಮಂದಿರಕ್ಕೆ ಬಂದು ಗುರುಗಳ ಆಶೀರ್ವಾದ ಪಡೆಯುವ ಭಕ್ತರು ಅಸಂಖ್ಯಾತ ಸಂಖ್ಯೆಯಲ್ಲಿದ್ದಾರೆ. ನೀವು ಕೂಡಾ ಶಿರಡಿ ದೇವಸ್ಥಾನಕ್ಕೆ ಹೋಗುವ ಯೋಜನೆ ಮಾಡುತ್ತಿದ್ದು ಇನ್ನೂ ದಿನಕೂಡಿ ಬಂದಿಲ್ಲವಾದರೆ, ಐಆರ್‌ಸಿಟಿಸಿಯ ಈ ಟೂರ್‌ ಪ್ಲಾನ್‌ (IRCTC Package) ಆಯ್ಕೆ ಮಾಡಿಕೊಳ್ಳಬಹುದು. ಬೆಂಗಳೂರಿನಿಂದ ಶಿರಡಿಯ ಪ್ರವಾಸ ಯೋಜನೆಯಲ್ಲಿ ಸಾಯಿಬಾಬಾ ಮಂದಿರ ಜೊತೆಗೆ ಶನಿ ಶಿಂಗಣಾಪುರದಲ್ಲಿರುವ ವಿಶಿಷ್ಟ ಶನಿ ದೇವಾಲಯಕ್ಕೂ ಭೇಟಿ ನೀಡಿ ಬರಬಹುದು.

ಬೆಂಗಳೂರನಿಂದ ನಾಲ್ಕು ದಿನ ಹಾಗೂ 3 ರಾತ್ರಿಗಳ ಈ ಪ್ಯಾಕೇಜ್‌ನಲ್ಲಿ ನೀವು ರೈಲಿನ ಮೂಲಕ ಶಿರಡಿ ಯಾತ್ರೆ ಮಾಡಬಹುದು. ಪ್ರತಿದಿನವೂ ಈ ಪ್ಯಾಕೇಜ್ ಅನ್ವಯವಾಗಲಿದೆ. ಅಂದರೆ ನಿಮ್ಮ ಬಿಡುವಿನ ದಿನಗಳಲ್ಲಿ...