ಭಾರತ, ಮಾರ್ಚ್ 18 -- ಮುಂಬೈ ಇಂಡಿಯನ್ಸ್ ಪಾಲಿಗೆ 2024 ಕರಾಳ ವರ್ಷ. 5 ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ 17ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ ಪಡೆದಿದ್ದ ಸ್ಥಾನ ಕೊನೆಯದ್ದು! ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್ ಮೂಲಕ ಮತ್ತೆ ಮುಂಬೈ ಇಂಡಿಯನ್ಸ್ ಸೇರಿದ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಪಡೆದರು. ಆದರೆ ಮುಂಬೈ ಮಾಲೀಕರು ತೆಗೆದುಕೊಂಡ ನಿರ್ಧಾರ ಹಿಟ್ಮ್ಯಾನ್ ಅಭಿಮಾನಿಗಳಿಗೆ ಸರಿ ಎನಿಸಲಿಲ್ಲ. ಹಾಗಾಗಿ ಹಾರ್ದಿಕ್ಗೆ ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಅದೆಲ್ಲವನ್ನೂ ಮೆಟ್ಟಿ ನಿಲ್ಲಲು ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಸಜ್ಜಾಗಿದ್ದಾರೆ.
ಜಿಯೋಹಾಟ್ಸ್ಟಾರ್ನಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ, 2024 ಸೀಸನ್ನಿಂದ ತಾವು ಕಲಿತ ಪಾಠಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. 'ತನ್ನ ಕಳೆದ ವರ್ಷದ ತಪ್ಪುಗಳ ಮೇಲೆ ಸಂಪೂರ್ಣ ವಿಶ್ಲೇಷಣೆ ನಡೆಸಿದ್ದೇನೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ತಂಡ ಪುನರ್ನಿರ್ಮಿಸಿದ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.