ಭಾರತ, ಮಾರ್ಚ್ 18 -- ಮುಂಬೈ ಇಂಡಿಯನ್ಸ್ ಪಾಲಿಗೆ 2024 ಕರಾಳ ವರ್ಷ. 5 ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ 17ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ ಪಡೆದಿದ್ದ ಸ್ಥಾನ ಕೊನೆಯದ್ದು! ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್ ಮೂಲಕ ಮತ್ತೆ ಮುಂಬೈ ಇಂಡಿಯನ್ಸ್ ಸೇರಿದ ಹಾರ್ದಿಕ್ ಪಾಂಡ್ಯ ಅವರು ರೋಹಿತ್​ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಪಡೆದರು. ಆದರೆ ಮುಂಬೈ ಮಾಲೀಕರು ತೆಗೆದುಕೊಂಡ ನಿರ್ಧಾರ ಹಿಟ್​ಮ್ಯಾನ್ ಅಭಿಮಾನಿಗಳಿಗೆ ಸರಿ ಎನಿಸಲಿಲ್ಲ. ಹಾಗಾಗಿ ಹಾರ್ದಿಕ್​ಗೆ ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಅದೆಲ್ಲವನ್ನೂ ಮೆಟ್ಟಿ ನಿಲ್ಲಲು ಹಾರ್ದಿಕ್​ ಪಾಂಡ್ಯ ಮತ್ತೊಮ್ಮೆ ಸಜ್ಜಾಗಿದ್ದಾರೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್ ಆಲ್​ರೌಂಡರ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ, 2024 ಸೀಸನ್‌ನಿಂದ ತಾವು ಕಲಿತ ಪಾಠಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. 'ತನ್ನ ಕಳೆದ ವರ್ಷದ ತಪ್ಪುಗಳ ಮೇಲೆ ಸಂಪೂರ್ಣ ವಿಶ್ಲೇಷಣೆ ನಡೆಸಿದ್ದೇನೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ತಂಡ ಪುನರ್​​ನಿರ್ಮಿಸಿದ್...