ಭಾರತ, ಏಪ್ರಿಲ್ 12 -- ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಅತ್ಯಂತ ಕಳಪೆ ಫಾರ್ಮ್ನಲ್ಲಿದೆ. ತಂಡದ ಈ ಬಾರಿಯ ಫಾರ್ಮ್ ನೋಡಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಯ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ. ಶುಕ್ರವಾರ (ಏ.11) ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 8 ವಿಕೆಟ್ಗಳಿಂದ ಹೀನಾಯವಾಗಿ ಸೋತ ತಂಡವು, ಈವರೆಗೆ ಆಡಿದ ಆರು ಪಂದ್ಯಗಳಿಂದ ಕೇವಲ ಒಂದರಲ್ಲಿ ಗೆದ್ದು ಸತತ 5 ಪಂದ್ಯಗಳಲ್ಲಿ ಸೋತಂತಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ಸಿಎಸ್ಕೆ ತಂಡ ಸತತ 5 ಪಂದ್ಯಗಳಲ್ಲಿ ಸೋತಿದೆ. ಇದು ತಂಡದ ಅಭಿಮಾನಿಗಳಿಗೂ ಭಾರಿ ನಿರಾಶೆ ಮೂಡಿಸಿದೆ.
ತಂಡಕ್ಕೆ ಟೂರ್ನಿಯಲ್ಲಿ ಮುಂದೆ ಎಂಟು ಪಂದ್ಯಗಳು ಮಾತ್ರ ಉಳಿದಿವೆ. ಹೀಗಾಗಿ ತಂಡ ಪ್ಲೇಆಫ್ ಪ್ರವೇಶಿಸುವ ಅವಕಾಶ ಇದೆಯಾ ಎಂಬ ಚಿಂತೆ ಅಭಿಮಾನಿಗಳದ್ದು. ಲೀಗ್ ಹಂತದ ಕೊನೆಯಲ್ಲಿ ಅಂಕಪಟ್ಟಿಯಲ್ಲಿ ಮೊದಲ ನಾಲ್ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.