ಭಾರತ, ಏಪ್ರಿಲ್ 12 -- ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಅತ್ಯಂತ ಕಳಪೆ ಫಾರ್ಮ್‌ನಲ್ಲಿದೆ. ತಂಡದ ಈ ಬಾರಿಯ ಫಾರ್ಮ್ ನೋಡಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಯ ಪ್ಲೇಆಫ್‌ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ. ಶುಕ್ರವಾರ (ಏ.11) ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 8 ವಿಕೆಟ್‌ಗಳಿಂದ ಹೀನಾಯವಾಗಿ ಸೋತ ತಂಡವು, ಈವರೆಗೆ ಆಡಿದ ಆರು ಪಂದ್ಯಗಳಿಂದ ಕೇವಲ ಒಂದರಲ್ಲಿ ಗೆದ್ದು ಸತತ 5 ಪಂದ್ಯಗಳಲ್ಲಿ ಸೋತಂತಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಸಿಎಸ್‌ಕೆ ತಂಡ ಸತತ 5 ಪಂದ್ಯಗಳಲ್ಲಿ ಸೋತಿದೆ. ಇದು ತಂಡದ ಅಭಿಮಾನಿಗಳಿಗೂ ಭಾರಿ ನಿರಾಶೆ ಮೂಡಿಸಿದೆ.

ತಂಡಕ್ಕೆ ಟೂರ್ನಿಯಲ್ಲಿ ಮುಂದೆ ಎಂಟು ಪಂದ್ಯಗಳು ಮಾತ್ರ ಉಳಿದಿವೆ. ಹೀಗಾಗಿ ತಂಡ ಪ್ಲೇಆಫ್‌ ಪ್ರವೇಶಿಸುವ ಅವಕಾಶ ಇದೆಯಾ ಎಂಬ ಚಿಂತೆ ಅಭಿಮಾನಿಗಳದ್ದು. ಲೀಗ್ ಹಂತದ ಕೊನೆಯಲ್ಲಿ ಅಂಕಪಟ್ಟಿಯಲ್ಲಿ ಮೊದಲ ನಾಲ್ಕ...