ಭಾರತ, ಮಾರ್ಚ್ 10 -- ಭಾರತ ಕ್ರಿಕೆಟ್‌ ತಂಡವು ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಟ್ರೋಫಿ ಗೆಲ್ಲುತ್ತಿದ್ದಂತೆಯೇ ಭಾರತ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಬಿಳಿ ಜಾಕೆಟ್‌ ಅನ್ನು ವಿತರಿಸಲಾಗಿದೆ. ಬೇರೆ ಯಾವ ಐಸಿಸಿ ಟೂರ್ನಿಯ ಸಮಯದಲ್ಲೂ ಟ್ರೋಫಿ ಗೆಲ್ಲುವ ತಂಡಗಳು ಈ ರೀತಿ ಜಾಕೆಟ್‌ ಧರಿಸುವುದಿಲ್ಲ. ಆದರೆ, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವ ತಂಡದ ಆಟಗಾರರಿಗೆ ಮಾತ್ರವೇ ಈ ಬಿಳಿ ಬಣ್ಣದ ಜಾಕೆಟ್‌ ಅನ್ನು ಕೊಡಲಾಗುತ್ತದೆ. ಪ್ರತಿ ಸದಸ್ಯರು ಕೂಡಾ ಈ ಜಾಕೆಟ್‌ ಧರಿಸಿಯೇ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸುತ್ತಾರೆ.

ಈ ಹಿಂದೆ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ನಡೆದ 2013ರ ಚಾಂಪಿಯನ್ಸ್ ಗೆದ್ದಾಗಲೂ ಇದೇ ರೀತಿ ಜಾಕೆಟ್‌ ಧರಿಸಿ ಸಂಭ್ರಮಿಸಿತ್ತು. ಈ ಬಾರಿ ದುಬೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ದ ಗೆದ್ದ ನಂತರವೂ, ಕಪ್‌ ವಿತರಿಸುವ ಮುನ್ನ ಪ್ರತಿ ಆಟಗಾರರಿಗೂ ಜಾಕೆಟ್‌ ವಿತರಿಸಲಾಯ್ತು. ಅಷ್ಟಕ್ಕೂ ಈ ಜಾಕೆಟ್‌ಗೆ ಇಷ್ಟು ಮಹತ್ವವೇಕೆ ಎಂಬುದನ್ನು ನೋಡೋಣ.

ಐಸಿಸಿ ಚಾಂಪಿಯನ್ಸ್...