ಭಾರತ, ಮಾರ್ಚ್ 18 -- ಅಶ್ವಥ್ ಮಾರಿಮುತ್ತು ನಿರ್ದೇಶಿಸಿದ 'ಡ್ರ್ಯಾಗನ್' ಸಿನಿಮಾ ಒಟಿಟಿಗೆ ಪಾದಾರ್ಪಣೆ ಮಾಡಲಿದೆ. ಈ ವಾರದಲ್ಲೇ ನೀವು ಮನೆಯಲ್ಲೇ ಕೂತು ಈ ತಮಿಳು ಸಿನಿಮಾವನ್ನು ವೀಕ್ಷಿಸಬಹುದು. ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುವ ಬಗ್ಗೆಯೂ ಮಾಹಿತಿ ನೀಡಿದೆ. ಚಿತ್ರದ ಬಗ್ಗೆ ಸಾಕಷ್ಟು ಜನ ಧನಾತ್ಮಕ ಅಭಿಪ್ರಾಯ ತಿಳಿಸಿದ್ದು. ಈ ಸಿನಿಮಾ ಉತ್ತಮವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಗಲ್ಲಾಪೆಟ್ಟಿಯಲ್ಲೂ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಎಲ್ಲ ವಯೋಮಾನದವರಿಗೂ ಮನರಂಜೆ ನೀಡುವ ಸಿನಿಮಾ ಇದಾಗಿದೆ.
ನಟ ಮತ್ತು ಚಲನಚಿತ್ರ ನಿರ್ಮಾಪಕ ಪ್ರದೀಪ್ ರಂಗನಾಥನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬ್ಲಾಕ್ಬಸ್ಟರ್ ತಮಿಳು ಸಿನಿಮಾ 'ಡ್ರ್ಯಾಗನ್' ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆಯೇ ನೆಟ್ಫ್ಲಿಕ್ಸ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಅದರಂತೆ ಈಗ ನೆಟ್ಫ್ಲಿಕ್ಸ್ನಲ್ಲಿ ಮಾರ್ಚ್ 21ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.