Bengaluru, ಮಾರ್ಚ್ 29 -- Brat Kannada Movie: 'ಕೌಸಲ್ಯ ಸುಪ್ರಜಾ ರಾಮ' ಚಿತ್ರದ ನಂತರ 'ಡಾರ್ಲಿಂಗ್' ಕೃಷ್ಣ ಅಭಿನಯದಲ್ಲಿ ಶಶಾಂಕ್ ಇನ್ನೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಅದ್ಯಾವ ಚಿತ್ರ, ಯಾರು ನಿರ್ಮಿಸುತ್ತಿದ್ದಾರೆ ಎಂದು ಶಶಾಂಕ್ ಗೌಪ್ಯವಾಗಿಟ್ಟಿದ್ದರು. ಇದೀಗ ಕೊನೆಗೂ ಆ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರಕ್ಕೆ 'ಬ್ರ್ಯಾಟ್' ಎಂಬ ಹೆಸರನ್ನು ಇಡಲಾಗಿದೆ.
ಈ ಹಿಂದೆ 'First Rank ರಾಜು' ಚಿತ್ರವನ್ನು ನಿರ್ಮಿಸಿದ್ದ ಮಂಜುನಾಥ್ ಕುಂದಕೂರು 'ಬ್ರ್ಯಾಟ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಐದೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಶೀರ್ಷಿಕೆಯ ಜೊತೆಗೆ ನಾಯಕನನ್ನು ಪರಿಚಯಿಸುವ ಮತ್ತು ಚಿತ್ರದ ಸಾರವನ್ನು ಹೇಳುವ ಒಂದು ಹಾಡನ್ನು ಶುಕ್ರವಾರ ರಾತ್ರಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಮುಂಗಡ ಟಿಕೆಟ್ ಬುಕಿಂಗ್ನಲ್ಲಿಯೇ 10 ಕೋಟಿ ರೂ. ಬಾಚಿಕೊಂಡ ಸಲ್ಮಾನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.