Bengaluru, ಮಾರ್ಚ್ 29 -- Brat Kannada Movie: 'ಕೌಸಲ್ಯ ಸುಪ್ರಜಾ ರಾಮ' ಚಿತ್ರದ ನಂತರ 'ಡಾರ್ಲಿಂಗ್‍' ಕೃಷ್ಣ ಅಭಿನಯದಲ್ಲಿ ಶಶಾಂಕ್‍ ಇನ್ನೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಅದ್ಯಾವ ಚಿತ್ರ, ಯಾರು ನಿರ್ಮಿಸುತ್ತಿದ್ದಾರೆ ಎಂದು ಶಶಾಂಕ್‍ ಗೌಪ್ಯವಾಗಿಟ್ಟಿದ್ದರು. ಇದೀಗ ಕೊನೆಗೂ ಆ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರಕ್ಕೆ 'ಬ್ರ್ಯಾಟ್‍' ಎಂಬ ಹೆಸರನ್ನು ಇಡಲಾಗಿದೆ.

ಈ ಹಿಂದೆ 'First Rank ರಾಜು' ಚಿತ್ರವನ್ನು ನಿರ್ಮಿಸಿದ್ದ ಮಂಜುನಾಥ್‍ ಕುಂದಕೂರು 'ಬ್ರ್ಯಾಟ್‍' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಐದೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಶೀರ್ಷಿಕೆಯ ಜೊತೆಗೆ ನಾಯಕನನ್ನು ಪರಿಚಯಿಸುವ ಮತ್ತು ಚಿತ್ರದ ಸಾರವನ್ನು ಹೇಳುವ ಒಂದು ಹಾಡನ್ನು ಶುಕ್ರವಾರ ರಾತ್ರಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲಿಯೇ 10 ಕೋಟಿ ರೂ. ಬಾಚಿಕೊಂಡ ಸಲ್ಮಾನ್‌...