Mangalore, ಏಪ್ರಿಲ್ 19 -- ಮಂಗಳೂರು: ಮಂಗಳೂರು ಹೊರವಲಯದ ಬಪ್ಪನಾಡು ಎಂಬಲ್ಲಿ ವಾರ್ಷಿಕ ರಥೋತ್ಸವದ ವೇಳೆ ರಥ ಮುರಿದುಬಿದ್ದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ವರ್ಷಾವಧಿ ಜಾತ್ರೆ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿದ್ದ ಸಂದರ್ಭ ರಥದ ಮೇಲ್ಭಾಗ ಮುರಿದುಬಿದ್ದಿದೆ. ರಾತ್ರಿ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಈ ವೇಳೆ ಸಾಕಷ್ಟು ಭಕ್ತರು ಇದ್ದರು. ಯಾರಿಗೂ ತೊಂದರೆ ಆಗಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕುಳ್ಳಿರಿಸಿ ಉತ್ಸವ ಮುಂದುವರಿಸಲಾಯಿತು.ಕೆಲಕಾಲ ಭಕ್ತರು ಆತಂಕಗೊಂಡಿದ್ದು, ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ
ಶುಕ್ರವಾರ ತಂತ್ರಿಗಳಿಂದ ವಿಶೇಷ ಪ್ರಾರ್ಥನೆಯೊಂದಿಗೆ ಬಲಿ ಆರಂಭಗೊಂಡಿತು. ಬಳಿಕ ವಿವಿಧ ವಾದ್ಯಗೋಷ್ಠಿ ಮತ್ತು ಓಕುಳಿ, ಉರುಳು ಸೇವೆಯ ಸುತ್ತಿನ ಬಳಿಕ ದೇವರು ಮೂಷಿಕ ರೂಪದಲ್ಲಿ ಪುಷ್ಪಾಲಂಕೃತ ಚಿನ್ನದ ಪಲ್ಲಕಿಯಲ್ಲಿ ಕುಳಿತು ಪೇಟೆ ಸವಾರಿಯಾಗಿ ರಥೋತ್ಸವ ಗದ್ದೆಗೆ ಆಗಮನವಾಯಿತು.
ಮೂಲ್ಕಿ ಸೀಮೆ ಅರಸರು ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಸಸಿಹಿತ್ತು ಶ್ರೀ ಭಗವತಿ ಮತ್ತು ಪರಿವಾರ ಶಕ್ತಿಗಳ ಆಗಮನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.