Bengaluru, ಫೆಬ್ರವರಿ 25 -- ಅರ್ಥ: ಧರ್ಮಾತ್ಮರಾದ ಬ್ರಾಹ್ಮಣರು, ಭಕ್ತರು ಮತ್ತು ರಾಜರ್ಷಿಗಳ ವಿಷಯದಲ್ಲಿ ಇದು ಇನ್ನಷ್ಟು ನಿಜ. ಆದುದರಿಂದ ಈ ಅಶಾಶ್ವತವಾದ ಮತ್ತು ದುಃಖದ ಲೋಕಕ್ಕೆ ಬಂದಿರುವ ನೀನು ನನ್ನ ಪ್ರೇಮಪೂರೈಕ ಸೇವೆಯಲ್ಲಿ ನಿರತನಾಗು.

ಭಾವಾರ್ಥ: ಈ ಐಹಿಕ ಜಗತ್ತಿನಲ್ಲಿ ಜನರ ಬೇರೆ ಬೇರೆ ವರ್ಗಗಳುಂಟು. ಏನೇ ಆಗಲಿ, ಈ ಜಗತ್ತು ಯಾರಿಗೂ ಸುಖದ ತಾಣವಲ್ಲ. 'ಅನಿತ್ಯಮ್ ಅಸುಖಮ್ ಲೋಕಮ್' ಈ ಲೋಕವು ಅಶಾಶ್ವತವಾಗಿದ್ದು, ದುಃಖಗಳಿಂದ ತುಂಬಿಹೋಗಿದೆ. ಇದು ಯಾವುದೇ ವಿವೇಕಯುಕ್ತನಾದ ಯೋಗ್ಯ ಮನುಷ್ಯನು ವಾಸಮಾಡುವಂತಹ ಸ್ಥಳವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ದೇವೋತ್ತಮ ಪರಮ ಪುರುಷನು ಈ ಪ್ರಪಂಚವು ಅಶಾಶ್ವತ ಮತ್ತು ಇದು ದುಃಖಗಳಿಂದ ತುಂಬಿಹೋಗಿದೆ ಎಂದು ಹೇಳುತ್ತಾನೆ. ಕೆಲವರು ತತ್ವಶಾಸ್ತ್ರಜ್ಞರು ಅದರಲ್ಲಿಯೂ ಮಾಯಾವಾದಿ ತತ್ವಶಾಸ್ತ್ರಜ್ಞರು ಈ ಜಗತ್ತು ಮಿಥ್ಯೆ ಎಂದು ಹೇಳುತ್ತಾರೆ. ಆದರೆ ಭಗವದ್ಗೀತೆಯಿಂದ ನಾವು ಈ ಜಗತ್ತು ಮಿಥ್ಯೆಯಲ್ಲ, ಆದರೆ ಅಶಾಶ್ವತ ಎಂದು ತಿಳಿದುಕೊಳ್ಳಬಹುದು.

ಅಶಾಶ್ವತತೆಗೂ ಮಿಥ ಗೂ ವ್ಯತ್ಯಾಸವುಂಟು. ...