Bengaluru, ಮಾರ್ಚ್ 15 -- ಅರ್ಥ: ಪರಿಶುದ್ಧಗೊಳಿಸುವವರಲ್ಲಿ ನಾನು ವಾಯು, ಶಸ್ತ್ರಧಾರಿಗಳಲ್ಲಿ ರಾಮ, ಮೀನುಗಳಲ್ಲಿ ನಾನು ಮಕರ ಮತ್ತು ಹರಿಯುವ ನದಿಗಳಲ್ಲಿ ಗಂಗಾನದಿ.

ಭಾವಾರ್ಥ: ಜಲವಾಸಿಗಳಲ್ಲಿ ಅತ್ಯಂತ ದೊಡ್ಡ ಪ್ರಾಣಿಗಳಲ್ಲಿ ತಿಮಿಂಗಿಲವು ಒಂದು. ನಿಶ್ಚಯವಾಗಿಯೂ ಅದು ಮನುಷ್ಯನಿಗೆ ಅತ್ಯಂತ ಅಪಾಯಕಾರಿ. ಅದು ಕೃಷ್ಣನ ಪ್ರತಿನಿಧಿ.

ಅರ್ಥ: ಅರ್ಜುನ, ಎಲ್ಲ ಸೃಷ್ಟಿಗಳಿಗೆ ನಾನೇ ಆದಿ, ಅಂತ್ಯ ಮತ್ತು ಮಧ್ಯ. ಎಲ್ಲ ವಿದ್ಯೆಗಳಲ್ಲಿ ನಾನು ಅಧ್ಯಾತ್ಮ ವಿದ್ಯೆಯು, ಎಲ್ಲ ತಾರ್ಕಿಕರಲ್ಲಿ ನಾನೇ ನಿರ್ಣಾಯಕ ಸತ್ಯ.

ಭಾವಾರ್ಥ: ಸೃಷ್ಟಿಯಾದ ಅಭಿವ್ಯಕ್ತಿಗಳಲ್ಲಿ ಮೊದಲನೆಯದು ಸಂಪೂರ್ಣ ಐಹಿಕ ಮೂಲಾಂಶಗಳದು. ಮೊದಲೇ ಹೇಳಿದಂತೆ, ವಿಶ್ವ ಅಭಿವ್ಯಕ್ತಿಯನ್ನು ಮಹಾವಿಷ್ಣು, ಗರ್ಭೋದಕಶಾಯಿ ವಿಷ್ಣು ಮತ್ತು ಕ್ಷೀರೋದಕಶಾಯಿ ವಿಷ್ಣು ಸೃಷ್ಟಿಮಾಡುತ್ತಾರೆ ಮತ್ತು ನಿರ್ವಹಿಸುತ್ತಾರೆ. ಅನಂತರ ಇದನ್ನು ಶಿವನು ನಾಶಮಾಡುತ್ತಾನೆ. ಬ್ರಹ್ಮನು ಗೌಣ ಸೃಷ್ಟಿಕರ್ತ, ಸೃಷ್ಟಿ, ಸ್ಥಿತಿ, ಲಯಗಳ ಈ ಶಕ್ತಿಗಳು ಪರಮ ಪ್ರಭುವಿನ ಐಹಿಕ ಗುಣಗಳ ಮೂರ್ತಿಗಳು. ಆದುದರಿ...