ಭಾರತ, ಜನವರಿ 26 -- ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಪ್ರವೇಶಿಸುವ ಮಾರ್ಗದಲ್ಲಿರುವ ನಾಮ ಫಲಕವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಗೆ ಉಕ್ಕಿಸುವುದರ ಜತೆ ಜತೆಗೆ ಗಂಭೀರವಾಗಿ ಚಿಂತಿಸುವಂತೆಯೂ ಮಾಡಿದೆ. ಈ ಸೈನ್‌ ಬೋರ್ಡ್‌ ಅನ್ನು ಎಕ್ಸ್​​ನಲ್ಲಿ ಪೋಸ್ಟ್‌ ಮಾಡಿರುವ ಸಂಜೀವ್‌ ಎಂಬುವರು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ತುಂಬಾ ಹಗುರವಾಗಿ ಜೋಕ್‌ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರೆ, ಕೆಲವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಜೀವ್‌ ಅವರು ಬೆಂಗಳೂರಿನ ಉದ್ಯಮಿ. ವಿಮಾನ ನಿಲ್ದಾಣ ಕಡೆಯಿಂದ ಹಿಂತಿರುಗುವಾಗ ಈ ಸೈನ್‌ ಬೋರ್ಡ್‌ ಅವರ ಕಣ್ಣಿಗೆ ಬಿದ್ದಿದ್ದು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಸೈನ್‌ ಬೋರ್ಡ್​ನಲ್ಲಿ ನಾಲ್ಕು ಮಾರ್ಗಗಳನ್ನು ತೋರಿಸುತ್ತದೆ. ಮೊದಲನೆಯದ್ದು Bengaluru ಗೆ ದಾರಿ ತೋರಿಸಿದರೆ ನಾಲ್ಕನೆಯದ್ದು Bangaluruಗೆ ದಾರಿ ತ...