Washington, ಮಾರ್ಚ್ 17 -- ವಾಷಿಂಗ್ಟನ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿರುವ ಭಾರತ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಅಮೆರಿಕದ ಗಗನಯಾತ್ರಿಗಳ ಜೋಡಿಯನ್ನು ಮಂಗಳವಾರ ಸಂಜೆ ಭೂಮಿಗೆ ಕರೆ ತರಲಾಗುವುದು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ. ಬುಧವಾರ ಇಲ್ಲವೇ ಗುರುವಾರ ಗಗನ ಯಾತ್ರಿಗಳು ಮರಳುವ ನಿರೀಕ್ಷೆಯಿತ್ತಾದರೂ ನಿಗದಿಗಿಂತ ಮೊದಲೇ ಮರಳುವರು ಎನ್ನುವ ಮಾಹಿತಿ ಲಭಿಸಿದೆ. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಮತ್ತೊಬ್ಬ ಅಮೇರಿಕನ್ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಯೊಂದಿಗೆ ಭಾನುವಾರ ಮುಂಜಾನೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿರುವ ಸ್ಪೇಸ್ ಎಕ್ಸ್ ಡ್ರ್ಯಾಗನ್ ಕ್ರಾಫ್ಟ್ನಲ್ಲಿ ಭೂಮಿಗೆ ಕರೆ ತರಲಾಗುವುದು. ಬಹುತೇಕ ಅಮೆರಿಕದ ಸಮಯದ ಪ್ರಕಾರ ಮಂಗಳವಾರ ಸಂಜೆಯೇ ವರು ವಾಪಸಾಗುವರು ಎಂದು ತಿಳಿಸಲಾಗಿದೆ. ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ತನ್ನ ಮೊದಲ ಸಿಬ್ಬಂದಿಯೊಂದಿಗೆ ಪರೀಕ್ಷಿಸುತ್ತಿದ್ದಾಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.